ಕಾಂಗ್ರೆಸ್ ಮುಖಂಡರಾದ ಹೂಡಾ, ಭಾಘೇಲ್, ಶುಕ್ಲಾ
ದೇಶ
ಹಿಮಾಚಲ ಪ್ರದೇಶ: ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿ, ಮೂವರು ನಾಯಕರನ್ನು ನಿಯೋಜಿಸಿದ ಕಾಂಗ್ರೆಸ್
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುವ ನಿರೀಕ್ಷೆ ಹೆಚ್ಚಾಗಿರುವಂತೆಯೇ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯೂ ಕಾಡಿದೆ. ಇದಕ್ಕಾಗಿ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ನಾಯಕರನ್ನು ನಿಯೋಜಿಸಲಾಗಿದೆ.
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುವ ನಿರೀಕ್ಷೆ ಹೆಚ್ಚಾಗಿರುವಂತೆಯೇ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯೂ ಕಾಡಿದೆ. ಇದಕ್ಕಾಗಿ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ನಾಯಕರನ್ನು ನಿಯೋಜಿಸಲಾಗಿದೆ.
ಮೂಲಗಳ ಪ್ರಕಾರ ಆಡಳಿತಾರೂಢ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಹೂಡಾ, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಅವರನ್ನು ಶಿಮ್ಲಾಕ್ಕೆ ಕಳುಹಿಸಲಾಗಿದೆ.
ಈ ಮಧ್ಯೆ, ಹಿರಿಯ ಬಿಜೆಪಿ ಮುಖಡ ವಿನೋದ್ ತಾವ್ದೆ ಕೂಡಾ ಶಿಮ್ಲಾ ಕೂಡಾ ಸಿಮ್ಲಾಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ