ಯೂಟ್ಯೂಬ್ ಜಾಹಿರಾತುಗಳನ್ನು ಪ್ರಶ್ನಿಸಿ 75 ಲಕ್ಷ ರೂ. ಪರಿಹಾರ ಕೇಳಿದ ವ್ಯಕ್ತಿಗೆ ದಂಡ ಹಾಕಿದ ಸುಪ್ರೀಂ ಕೋರ್ಟ್

ಯೂಟ್ಯೂಬ್ ನಲ್ಲಿ ವಯಸ್ಕರ ಅಂಶವಿರುವ ಜಾಹಿರಾತು ಪ್ರಕಟಿಸಿದ್ದನ್ನು ಪ್ರಶ್ನಿಸಿ ಗೂಗಲ್ ಇಂಡಿಯಾದಿಂದ 75 ಲಕ್ಷ ರೂಪಾಯಿ ಪರಿಹಾರ ಕೇಳಿದ್ದ ಅರ್ಜಿದಾರರೊಬ್ಬರಿಗೆ ಸುಪ್ರೀಂ ಕೋರ್ಟ್ 25,000 ದಂಡ ವಿಧಿಸಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಯೂಟ್ಯೂಬ್ ನಲ್ಲಿ ವಯಸ್ಕರ ಅಂಶವಿರುವ ಜಾಹಿರಾತು ಪ್ರಕಟಿಸಿದ್ದನ್ನು ಪ್ರಶ್ನಿಸಿ ಗೂಗಲ್ ಇಂಡಿಯಾದಿಂದ 75 ಲಕ್ಷ ರೂಪಾಯಿ ಪರಿಹಾರ ಕೇಳಿದ್ದ ಅರ್ಜಿದಾರರೊಬ್ಬರಿಗೆ ಸುಪ್ರೀಂ ಕೋರ್ಟ್ 25,000 ದಂಡ ವಿಧಿಸಿದೆ. 

 ಈ ಅರ್ಜಿ ಸಲ್ಲಿಸಿದ್ದ ಮಧ್ಯಪ್ರದೇಶದ ನಿವಾಸಿ, ಈ ರೀತಿಯ ಜಾಹಿರಾತುಗಳಿಂದಾಗಿ ತಮ್ಮ ಗಮನ ಬೇರೆಡೆಗೆ ಹೋಗಿದ್ದು, ತಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತಮಗೆ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ವಾದಿಸಿದ್ದರು. 

ಗೂಗಲ್ ಮಾಲಿಕತ್ವದ ಯೂಟ್ಯೂಬ್ ವೀಡಿಯೋಗಳನ್ನು ಪ್ರಕಟಿಸುವ ವೇದಿಕೆಯಾಗಿದೆ. ನೀವು ಇಂಟರ್ ನೆಟ್ ನಲ್ಲಿ ಜಾಹಿರಾತುಗಳನ್ನು ನೋಡಿದ್ದಕ್ಕಾಗಿ ಪರಿಹಾರ ಕೇಳುತ್ತಿದ್ದೀರಾ? ಹಾಗೂ ಜಾಹಿರಾತು ನೋಡಿ ನಿಮ್ಮ ಗಮನ ಬೇರೆಡೆಗೆ ಹೋಯಿತು ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದೀರಾ? ಎಂದುನ ನ್ಯಾೆಸ್ ಕೆ ಕೌಲ್ ಹಾಗೂ ಎಎಸ್ ಓಕಾ ಅವರಿದ್ದ ಪೀಠ ಅರ್ಜಿದಾರರನ್ನು ಪ್ರಶ್ನಿಸಿದೆ.

ಆರ್ಟಿಕಲ್ 32 ರ ಅಡಿಯಲ್ಲಿ ಸಲ್ಲಿಸಲಾಗಿರುವ ಅತಿ ಘೋರ ಅರ್ಜಿಯಾಗಿದ್ದು, ಇಂತಹ ಅರ್ಜಿಗಳು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ನ್ಯಾಯಪೀಠ ಹೇಳಿದೆ. ಇದೇ ವೇಳೆ ಅರ್ಜಿದಾರರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ನಗ್ನತೆಯ ಅಂಶಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದಾರೆ.

ನಿಮಗೆ ಜಾಹಿರಾತು ಇಷ್ಟವಾಗದ್ದಲ್ಲಿ ನೀವು ನೋಡಬೇಡಿ, ನೋಡುವುದೂ ಬಿಡುವುದೂ ನಿಮ್ಮ ಆಯ್ಕೆಯಾಗಿದ್ದು, ನೋಡುವುದನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತೀರಿ? ಎಂದು ನ್ಯಾಯಪೀಠ ಅರ್ಜಿದಾರರಿಗೆ ಪ್ರಶ್ನಿಸಿದೆ. ಪ್ರಾರಂಭದಲ್ಲಿ ಸುಪ್ರೀಂ ಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಬಳಿಕ ಅದನ್ನು 25,000 ರೂಪಾಯಿಗಳಿಗೆ ಇಳಿಕೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com