ಸುಲ್ಲಿ ಡೀಲ್ಸ್: ಆರೋಪಿಯ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನುಮತಿ

ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ಸುಲ್ಲಿ ಡೀಲ್ಸ್ ಪ್ರಕರಣದ ಪ್ರಮುಖ ಆರೋಪಿಯ ವಿಚಾರಣೆಗೆ ಅನುಮತಿ ನೀಡಿದ್ದಾರೆ.
ಓಂಕಾರೇಶ್ವರ್ ಠಾಕೂರ್
ಓಂಕಾರೇಶ್ವರ್ ಠಾಕೂರ್

ದೆಹಲಿ: ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ಸುಲ್ಲಿ ಡೀಲ್ಸ್ ಪ್ರಕರಣದ ಪ್ರಮುಖ ಆರೋಪಿಯ ವಿಚಾರಣೆಗೆ ಅನುಮತಿ ನೀಡಿದ್ದಾರೆ.  ಸುಲ್ಲಿ ಡೀಲ್ಸ್ ನಲ್ಲಿ ಮುಸ್ಲಿಮ್ ಮಹಿಳೆಯರನ್ನು ಆನ್ ಲೈನ್ ನಲ್ಲಿ ಹರಾಜು ಹಾಕಲಾಗುತ್ತಿತ್ತು. 

ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ್ ಠಾಕೂರ್ ಅವರನ್ನು ಸಿಆರ್ ಪಿಸಿ ಸೆಕ್ಷನ್ 196 ರ ಪ್ರಕಾರ ತನಿಖೆ ನಡೆಸಲಾಗುತ್ತದೆ.
  
ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಆರೋಪಿಯನ್ನು ವಿಚಾರಣೆ ಮಾಡಬೇಕಿದ್ದರು ಪೊಲೀಸರಿಗೆ ಲೆಫ್ಟಿನೆಂಟ್ ಗೌರ್ನರ್ ಅನುಮತಿ ಬೇಕಾಗಿರುತ್ತದೆ.

ಮುಸ್ಲಿಮ್ ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಸುಲ್ಲಿ ಡೀಲ್ಸ್ ಆಪ್ ನ್ನು ಸಿದ್ಧಪಡಿಸಿದ್ದ ಠಾಕೂರ್ ಈ ಆಪ್ ಮೂಲಕ ಮುಸ್ಲಿಮ್ ಮಹಿಳೆಯರನ್ನು ಹರಾಜು ಹಾಕುವ ಟ್ವಿಟರ್ ಹ್ಯಾಂಡಲ್ ನ್ನು ಹೊಂದಿದ್ದ.
 
2021 ರ ಜು.07 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಆತನ ವಿರುದ್ಧ ತನಿಖೆಗೆ ಲೆಫ್ಟಿನೆಂಟ್ ಗೌರ್ನರ್ ಆದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com