ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ: ಕುಟುಂಬ ಸದಸ್ಯರೊಂದಿಗೆ ರಾಹುಲ್ ಹೆಜ್ಜೆ; ಕುಟುಂಬ ರಾಜಕಾರಣ ಎಂದ ನೆಟ್ಟಿಗರು!
ಕೊಟಾ: ರಾಜಸ್ಥಾನದ ಬುಂಡಿ ಜಿಲ್ಲೆಯಿಂದ ಸೋಮವಾರ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಆಕೆಯ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಪುತ್ರಿಯರು ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.
ಬಾಬೈಯಿಂದ ಸ್ವೈಮಾಧೋಪುರ ಜಿಲ್ಲೆಯ ಪಿಫಲ್ ವಾರದವೆಗೂ ಮಧ್ಯಾಹ್ನದವರೆಗೂ ನಡೆದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಅಪಾರ ಸಂಖ್ಯೆಯ ಮಹಿಳೆಯರು ಪಾಲ್ಗೊಂಡರು. ನಂತರ ಅಲ್ಲಿ ಯಾತ್ರೆಗೆ ಸ್ವಲ್ಪ ಹೊತ್ತು ಬಿಡುವು ನೀಡಲಾಗಿತ್ತು
ಭಾರತ್ ಜೋಡೋ ಯಾತ್ರೆಯ 96 ನೇ ದಿನದ ಸಂದರ್ಭದಲ್ಲಿ ಇಂದು ಇಡೀ ದಿನ ನಾರಿ ಶಕ್ತಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಯಾತ್ರೆ ಆರಂಭವಾದಾಗಿನಿಂದಲೂ ರಾಹುಲ್ ಜೊತೆಗೆ ಹೆಜ್ಜೆ ಹಾಕುತ್ತಿರುವ ಯಾತ್ರಿ ರಾಹುಲ್ ರಾವ್ ಹೇಳಿದರು.
ನಂತರ ಸಂಜೆ ಪಿಫಿಲ್ ವಾರಾದಿಂದ ಯಾತ್ರೆ ಪುನರ್ ಆರಂಭವಾಯಿತು. ಇಂದಿನ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಕುಟುಂಬದೊಂದಿಗೆ ರಾಹುಲ್ ಹೆಜ್ಜೆ ಹಾಕಿರುವ ಫೋಟೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ನಾನಾ ರೀತಿಯಲ್ಲಿ ಟೀಕಿಸಿ ಟ್ವೀಟ್ ಮಾಡುತ್ತಿದ್ದಾರೆ. ಇದು ಕುಟುಂಬ ರಾಜಕಾರಣಕ್ಕೆ ಸಾಕ್ಷಿ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಫ್ಯಾಮಿಲಿ ಫಿಕ್ ನಿಕ್ ಫೋಟೋ ಎಂದು ಟೀಕಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ