ರಾಜಸ್ಥಾನ: ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು

ರಾಜಸ್ಥಾನದ ಕೋಟಾದಲ್ಲಿ ಒಂದೇ ಹಾಸ್ಟೇಲ್ ನಲ್ಲಿದ್ದು, ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಒಂದೇ ಹಾಸ್ಟೇಲ್ ನಲ್ಲಿದ್ದು, ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆತ್ಮಹತ್ಯೆ ಮಾಡಿಕೊಂಡ ಮೂವರು ವಿದ್ಯಾರ್ಥಿಗಳು 16, 17 ಮತ್ತು 18 ವರ್ಷ ವಯಸ್ಸಿನವರಾಗಿದ್ದು, ನೀಟ್ ಹಾಗೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಈ ಮೂವರು ಸ್ನೇಹಿತರಾಗಿದ್ದು, ಒಂದೇ ಹಾಸ್ಟೆಲ್‌ನಲ್ಲಿ, ಅಕ್ಕ ಪಕ್ಕದ ಕೊಠಡಿಗಳಲ್ಲಿವಾಸವಿದ್ದರು.

ಮೃತ ಅಂಕುಶ್ ಮತ್ತು ಉಜ್ವಲ್ ಎಂಬ ವಿದ್ಯಾರ್ಥಿಗಳ ಬಿಹಾರ ಮೂಲದವರಾಗಿದ್ದು, ಮೂರನೇ ವಿದ್ಯಾರ್ಥಿ ಪ್ರಣವ್ ಮಧ್ಯಪ್ರದೇಶದವರಾಗಿದ್ದಾರೆ.

ಅಂಕುಶ್ ಎಂಜಿನಿಯರಿಂಗ್ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಉಜ್ವಲ್ ಮತ್ತು ಪ್ರಣವ್ ಅವರು ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಗೆ ತಯಾರಿ ನಡೆಸುತ್ತಿದ್ದರು.

ಈ ಮೂವರು ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com