ಭಗವಾನ್ 'ರಾಮ'ನ ಜೊತೆ ದೇಶದ ಜನತೆಗೆ 'ರೊಟ್ಟಿ'ಯೂ ಬೇಕು: ದತ್ತಾತ್ರೇಯ ಹೊಸಬಾಳೆ

ದೇಶದ ಜನರಿಗೆ ಭಗವಾನ್ ರಾಮನ ಜತೆಗೆ ‘ರೊಟ್ಟಿ’ ಯೂ ಬೇಕು, ಅಂದರೆ ಕೈಗಾರಿಕೆಗಳು, ಸಂಪತ್ತು ಮತ್ತು ಉದ್ಯೋಗಗಳೂ ದೇಶಕ್ಕೆ ಬೇಕಾಗಿದ್ದು ಎರಡೂ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ  ಹೇಳಿದ್ದಾರೆ.
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ

ಭೂಪಾಲ್: ದೇಶದ ಜನರಿಗೆ ಭಗವಾನ್ ರಾಮನ ಜತೆಗೆ ‘ರೊಟ್ಟಿ’ ಯೂ ಬೇಕು, ಅಂದರೆ ಕೈಗಾರಿಕೆಗಳು, ಸಂಪತ್ತು ಮತ್ತು ಉದ್ಯೋಗಗಳೂ ದೇಶಕ್ಕೆ ಬೇಕಾಗಿದ್ದು ಎರಡೂ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ  ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಮಧ್ಯಭಾರತ ಪ್ರಾಂತದಲ್ಲಿ (ಕೇಂದ್ರ ಭಾರತ) ಸ್ಥಾಪಿಸಲಾದ 16 ಉದ್ಯೋಗ ಸೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಹೆಮ್ಮೆ ಮತ್ತು ಸಂಸ್ಕೃತಿಗಾಗಿ, ಅಯೋಧ್ಯೆಯಲ್ಲಿ ರಾಮನಿಗೆ ಮಂದಿರವನ್ನು ನಿರ್ಮಿಸಬೇಕು ಎಂಬ ಭಾವನೆ ದೇಶದ ಜನರ ಆಶಯವಾಗಿತ್ತು.

ಪ್ರತಿ ಪಥದಲ್ಲೂ ದೇವಾಲಯಗಳಿವೆ. ಆದರೆ ದೇಶದ ಜನರು ಅಯೋಧ್ಯೆಯಲ್ಲೇ ರಾಮಮಂದಿರ ಕಟ್ಟಬೇಕೆಂಬ ಆಕಾಂಕ್ಷೆ ಹೊಂದಿದ್ದರು. ಏಕೆಂದರೆ ಅದು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಭಾವನೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.

ಭಾರತೀಯ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶದಿಂದ ಪಲಾಯನ ಮಾಡಿದ ಉದ್ಯಮಿಗಳನ್ನು ಅವರು ಹಿಡಿಯಲು ಅಧಿಕಾರಿಗಳು ಹೆಚ್ಚಿನ ಕೆಲಸ ಮಾಡಬೇಕು, "ಅನೇಕ ಜನರು ಕೋಟ್ಯಂತರ ರೂಪಾಯಿ ಅಪಾರ ನಷ್ಟವನ್ನುಂಟು ಮಾಡಿದ್ದಾರೆ, ನೀವು ಅವರನ್ನು ಹಿಡಿಯಲು ಏನನ್ನೂ ಮಾಡುತ್ತಿಲ್ಲ ಎಂದುು ನಮಗೆ ಎಲ್ಲವೂ ತಿಳಿದಿದೆ.

ಕೆಲವು ಉದ್ಯಮಿಗಳು ಬ್ಯಾಂಕ್‌ಗಳಿಗೆ ಏನು ಮಾಡಿದ್ದಾರೆ. ನಾವು ಅವರನ್ನು ಜೈಲಿಗೆ ಕಳುಹಿಸಿದ್ದೇವೆಯೇ? ಏನೂ ಆಗಿಲ್ಲ. ಯುವಕನೊಬ್ಬ ₹ 10 ಲಕ್ಷ ಸಾಲ ಮರುಪಾವತಿ ಮಾಡದಿರುವ ಬಗ್ಗೆ ಹೆಚ್ಚು ಕಾಳಜಿ ಇದೆ, ಆದರೆ ಕೋಟ್ಂಯತರ ರು ಹಣ ನುಂಗಿದವರನ್ನು ಹಿಡಿಯಲು ನಮ್ಮಿಂದ ಆಗುತ್ತಿಲ್ಲ  ದತ್ತಾತ್ರೇಯ ಹೊಸಬಾಳೆ ಅಸಮಾಧಾನ ವ್ಯಕ್ತ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com