ಬಂಗಾಳದಲ್ಲಿ ಬ್ಲಾಂಕೆಟ್ ವಿತರಣೆ ವೇಳೆ ಕಾಲ್ತುಳಿತ: 3 ಸಾವು 

ಬಂಗಾಳದಲ್ಲಿ ಬ್ಲಾಂಕೆಟ್ ವಿತರಣೆ ವೇಳೆ ಕಾಲ್ತುಳಿತ ಉಂಟಾಗಿ 3 ಮಂದಿ ಸಾವನ್ನಪ್ಪಿದ್ದಾರೆ. 
ಬಂಗಾಳದಲ್ಲಿ ಕಾಲ್ತುಳಿತ
ಬಂಗಾಳದಲ್ಲಿ ಕಾಲ್ತುಳಿತ
Updated on

ಕೋಲ್ಕತ್ತ: ಬಂಗಾಳದಲ್ಲಿ ಬ್ಲಾಂಕೆಟ್ ವಿತರಣೆ ವೇಳೆ ಕಾಲ್ತುಳಿತ ಉಂಟಾಗಿ 3 ಮಂದಿ ಸಾವನ್ನಪ್ಪಿದ್ದಾರೆ. 

ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು,  ವಿಪಕ್ಷ ನಾಯಕ ಸುವೇಂದು ಅಧಿಕಾರಿ ಬ್ಲಾಂಕೆಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುವೇಂದು ಅಧಿಕಾರಿ ಸ್ಥಳದಿಂದ ತೆರಳುತ್ತಿದ್ದಂತೆಯೇ ಜನರು ವೇದಿಕೆಯತ್ತ ಧಾವಿಸಿದ ಪರಿಣಾಮ ಕಾಲ್ತುಳಿತ ಉಂಟಾಗಿದೆ.
 
ಸುವೇಂದು ಅಧಿಕಾರಿ ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದು, ಆಡಳಿತಾರೂಢ ಪಕ್ಷ ಟಿಎಂಸಿ ಸುವೇಂದು ಅಧಿಕಾರಿ ಸೃಷ್ಟಿಸಿದ ಅವ್ಯವಸ್ಥೆಯೇ ಈ ಘಟನೆಗೆ ಕಾರಣ ಎಂದು ಹೇಳಿದೆ. ಕಾರ್ಯಕ್ರಮದಲ್ಲಿ 5,000 ಮಂದಿ ಇದ್ದರು ಎಂದು ಟಿಎಂಸಿ ನಾಯಕ ಅಸಾನ್ಸೋಲ್ ಮೇಯರ್ ಬಿಧನ್ ಉಪಾಧ್ಯಾಯ ಹೇಳಿದ್ದಾರೆ. 

ಕಾಲ್ತುಳಿತದಲ್ಲಿ 5 ಮಂದಿ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com