'ಹೊಸ ಕೀಳು ಮಟ್ಟಕ್ಕೆ ಇಳಿದ ಪಾಕ್': ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಭುಟ್ಟೋ ವಿರುದ್ಧ ಭಾರತ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ವಿರುದ್ಧ ಭಾರತ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಆ ದೇಶಕ್ಕೂ 'ಹೊಸ ಕೀಳು ಮಟ್ಟದ...
ಪಾಕ್ ವಿದೇಶಾಂಗ ಸಚಿವ ಬಿಲಾವಲ್
ಪಾಕ್ ವಿದೇಶಾಂಗ ಸಚಿವ ಬಿಲಾವಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ವಿರುದ್ಧ ಭಾರತ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಆ ದೇಶಕ್ಕೂ 'ಹೊಸ ಕೀಳು ಮಟ್ಟದ ಹೇಳಿಕೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನ್ಯೂಯಾರ್ಕ್‌ನಲ್ಲಿ ಬುಧವಾರ ಮತ್ತು ಗುರುವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ನಿಮ್ಮ ದೇಶ  ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹಿಲರಿ ಕ್ಲಿಂಟನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಸಾಕಿದರೆ ಅವು ನಿಮ್ಮ ನೆರೆಹೊರೆಯವರಿಗೆ ಮಾತ್ರ ಕಚ್ಚುತ್ತವೆ ಎಂದು ನೀವು ಭಾವಿಸಬಾರದು. ಅಂತಿಮವಾಗಿ ಅವು ನಿಮ್ಮನ್ನು ಕಚ್ಚುತ್ತವೆ ಎಂದು ಹೇಳಿದ್ದನ್ನು ಜೈಶಂಕರ್ ಉಲ್ಲೇಖಿಸಿದರು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಭಾರತ ಎರಡೂ ದೇಶಗಳಲ್ಲಿನ ಮುಸ್ಲಿಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಅಲ್ಲದೆ "ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ" ಎಂದು ಜೈಶಂಕರ್‌ಗೆ ಹೇಳಿದರು.

ಭುಟ್ಟೋ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಇದು "ಪಾಕಿಸ್ತಾನಕ್ಕೂ ಹೊಸ ಕೀಳು ಮಟ್ಟದ ಹೇಳಿಕೆ", ಆದರೆ "'ಮೇಡ್ ಇನ್ ಪಾಕಿಸ್ತಾನ' ಭಯೋತ್ಪಾದನೆಯನ್ನು ನಿಲ್ಲಿಸಬೇಕಾಗಿದೆ" ಎಂದು ವ್ಯಂಗ್ಯವಾಡಿದರು.

ಪಾಕಿಸ್ತಾನದ ವಿದೇಶಾಂಗ ಸಚಿವರ "ಹತಾಶೆ"ಯು ಭಯೋತ್ಪಾದನೆಯನ್ನು ತಮ್ಮ "ರಾಜ್ಯ ನೀತಿ"ಯ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ತಮ್ಮದೇ ದೇಶದ ಭಯೋತ್ಪಾದಕ ಉದ್ಯಮಗಳ ಮಾಸ್ಟರ್‌ಮೈಂಡ್‌ಗಳಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಬಾಗ್ಚಿ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com