ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಸಂಸತ್ತಿನಲ್ಲಿ ಪ್ರತಿಧ್ವನಿ: ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸಣ್ಣ ವ್ಯಾಪಾರಿಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಲಹರ್ ಸಿಂಗ್

ನಿನ್ನೆ ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಲಹರ್ ಸಿಂಗ್ ಅವರು ಚನ್ನಪಟ್ಟಣದ ಕುಶಲಕರ್ಮಿಗಳು, ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಬಿಡದಿ ಮತ್ತು ಮದ್ದೂರು ವಡೆ ತಿನಿಸುಗಳ ತಟ್ಟೆ ಇಡ್ಲಿ ತಿನಿಸುಗಳ ಕೇಂದ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸಂಸತ್ತು
ಸಂಸತ್ತು
Updated on

ಬೆಂಗಳೂರು: ನಿನ್ನೆ ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಲಹರ್ ಸಿಂಗ್ ಅವರು ಚನ್ನಪಟ್ಟಣದ ಕುಶಲಕರ್ಮಿಗಳು, ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಬಿಡದಿ ಮತ್ತು ಮದ್ದೂರು ವಡೆ ತಿನಿಸುಗಳ ತಟ್ಟೆ ಇಡ್ಲಿ ತಿನಿಸುಗಳ ಕೇಂದ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (TNIE-The New Indian Express) ಪತ್ರಿಕೆಯ ವರದಿಯಲ್ಲಿ ರಾಜ್ಯಸಭೆಯಲ್ಲಿ ಉಲ್ಲೇಖಿಸಿದರು.

“Is it the end of the road for world-famous Land of Toys, Iconic eateries on Mysuru Highway take a hit too”  ಎಂಬ ವರದಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಕಟವಾಗಿತ್ತು. ಎಕ್ಸ್‌ಪ್ರೆಸ್‌ವೇ ಜನರ ಜೀವನೋಪಾಯವನ್ನು ಕಸಿದುಕೊಳ್ಳುತ್ತದೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಕುಶಲಕರ್ಮಿಗಳು, ವ್ಯಾಪಾರ ಮಾಲೀಕರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಲಹರ್ ಸಿಂಗ್ ಕೇಂದ್ರವನ್ನು ಒತ್ತಾಯಿಸಿದರು. ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೆ ಅಂಟಿಕೊಂಡಿರುವ ಕುಶಲಕರ್ಮಿಗಳ ಸಂಕಷ್ಟದ ಕುರಿತು, ದೆಹಲಿ ಹಾಟ್ ನ ಮಾದರಿಯಲ್ಲಿ ದಶಪಥಗಳ ಹೆದ್ದಾರಿಯಲ್ಲಿ ಕೇಂದ್ರವು ಕರಕುಶಲ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಪ್ರಮುಖ ತಿಂಡಿ ಅಡ್ಡಾಗಳು ಹೆದ್ದಾರಿಗೆ ಬಲಿ: ಈ ಹೆದ್ದಾರಿಯಲ್ಲಿ ಬೈಪಾಸ್ ಮಾಡುವುದರಿಂದ ಪ್ರಮುಖ ಪಟ್ಟಣಗಳು ಹಾದುಹೋಗುವುದರಿಂದ ಬಿಡದಿ, ಮದ್ದೂರು ಮತ್ತು ರಾಮನಗರದಲ್ಲಿ ಸ್ಥಳೀಯ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ತಿನಿಸು ಕೇಂದ್ರಗಳು ಎತ್ತಂಗಡಿಯಾಗುತ್ತವೆ ಎಂದು ಸಿಂಗ್ ಹೇಳಿದರು.

ಈ ಬಗ್ಗೆ ಲಹರ್ ಸಿಂಗ್ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ, ಸಣ್ಣ-ಪ್ರಮಾಣದ ಕೈಗಾರಿಕೆಗಳು, ಉದ್ದಿಮೆಗಳು ಇಲ್ಲಿ ಸಾಕಷ್ಟು ಇರುವುದರಿಂದ ಸಾಕಷ್ಟು ಕರಕುಶಲಕರ್ಮಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುವುದರಿಂದ ನಾನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಅವರನ್ನು ಭೇಟಿ ಮಾಡಿ ಈ ಕೈಗಾರಿಕೆಗಳಿಗೆ ಸಹಾಯ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಸಿಂಗ್ TNIE ಗೆ ತಿಳಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಮೂಲಕ ಈ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದು, ಸಾರ್ವಜನಿಕ ಕಳವಳ ವರದಿಯನ್ನು ಪ್ರಕಟಿಸಿದ್ದಕ್ಕೆ ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com