ದೆಹಲಿ ಲಿಕ್ಕರ್ ಹಗರಣ: ಇಂಡೋ ಸ್ಪಿರಿಟ್ಸ್ ನಲ್ಲಿ ಕೆಸಿಆರ್ ಪುತ್ರಿ ಕವಿತಾ ಪಾಲು ಎಂಬ ಸ್ಫೋಟಕ ಮಾಹಿತಿ ಇಡಿಯಿಂದ ಬಹಿರಂಗ

ಜಾರಿ ನಿರ್ದೇಶನಾಲಯ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ವಿರುದ್ಧ ಗಂಭೀರ ಆರೋಪ ಮಾಡಿದೆ. 
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ ಕವಿತಾ ಅವರನ್ನು ಹೈದರಾಬಾದ್‌ನಲ್ಲಿ 'ದೆಹಲಿ ಅಬಕಾರಿ ನೀತಿ ಹಗರಣ'ಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಡೆಸಿದ ಬಳಿಕ ಕಂಡುಬಂದದ್ದು ಹೀಗೆ
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ ಕವಿತಾ ಅವರನ್ನು ಹೈದರಾಬಾದ್‌ನಲ್ಲಿ 'ದೆಹಲಿ ಅಬಕಾರಿ ನೀತಿ ಹಗರಣ'ಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಡೆಸಿದ ಬಳಿಕ ಕಂಡುಬಂದದ್ದು ಹೀಗೆ

ನವದೆಹಲಿ: ಜಾರಿ ನಿರ್ದೇಶನಾಲಯ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ವಿರುದ್ಧ ಗಂಭೀರ ಆರೋಪ ಮಾಡಿದೆ. 

ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಮತ್ತು ಅವರ ಪಾಲುದಾರ ಒಟ್ಟಾಗಿ ಲಿಕ್ಕರ್ ಕಂಪೆನಿ ಇಂಡೊ ಸ್ಪಿರಿಟ್ ನಲ್ಲಿ ಶೇಕಡಾ 65ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ಹೇಳಿದೆ. ಕವಿತಾ ಅವರ ಹೆಸರು ಆರಂಭದಿಂದಲೂ ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಳಿಬರುತ್ತಿದೆ. 

ಕಳೆದ ತಿಂಗಳು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಇಡಿ ಕವಿತಾ ಪ್ರತಿನಿಧಿಗಳ ಮೂಲಕ ಮದ್ಯದ ಕಂಪೆನಿಯಲ್ಲಿ ಪಾಲನ್ನು ಹೊಂದಿದ್ದು ಪ್ರತಿನಿಧಿಗಳನ್ನು ಗುರುತಿಸಿ ತನಿಖೆ ನಡೆಸಲಾಗಿದೆ ಎಂದು ಹೇಳಿದೆ. ಇಡಿ ವಿಶೇಷ ಕೋರ್ಟ್ ನಲ್ಲಿ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಮುಂದೆ ಆರೋಪಪಟ್ಟಿಯನ್ನು ಸಲ್ಲಿಸಿದ್ದು ಪ್ರಕರಣದ ಗಂಭೀರತೆ ಮತ್ತು ತೀವ್ರತೆಯನ್ನು ಪರಿಗಣಿಸಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿದೆ.

ಹಗರಣ ಬೆಳಕಿಗೆ ಬಂದಿದ್ದು ಹೇಗೆ?: ದೆಹಲಿ ಲಿಕ್ಕರ್ ಹಗರಣ ಬೆಳಕಿಗೆ ಬಂದ ರೀತಿಯನ್ನು ಜಾರಿ ನಿರ್ದೇಶನಾಲಯ ವಿವರವಾಗಿ ತಿಳಿಸಿದೆ. "ಈ ಹಗರಣ ಮತ್ತು ಪಿತೂರಿಯ ನಿರ್ಣಾಯಕ ಪುರಾವೆಗಳೆಂದರೆ ಇಂಡಿಯಾ ಸ್ಪಿರಿಟ್ಸ್ ಪಾಲುದಾರಿಕೆಯು ರೂಪುಗೊಂಡ ಸಂದರ್ಭಗಳು. ನವೆಂಬರ್ 12 ರ ತನ್ನ ಹೇಳಿಕೆಯಲ್ಲಿ ಸಮೀರ್ (ಮಹೇಂದ್ರು) ಬಹಿರಂಗಪಡಿಸಿದಂತೆ, ವಿಜಯ್ ನಾಯರ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸ್ನೇಹಿತರ ಗುಂಪಿನ ಭಾಗವಾಗಿ ಅರುಣ್ ಪಿಳ್ಳೈಗೆ ಪರಿಚಯಿಸಿದರು, ಅವರು ಸಮೀರ್ ಅವರ ದೆಹಲಿ ವ್ಯವಹಾರದಲ್ಲಿ ಪಾಲನ್ನು ಕೇಳಿದರು.

ಸಮೀರ್ ಈ ಪಾಲುದಾರಿಕೆಯ ಷರತ್ತನ್ನು ಒಪ್ಪಲಿಲ್ಲ. ಈ ವ್ಯಕ್ತಿಗಳಿಂದ ಯಾವುದೇ ಗಮನಾರ್ಹ ಹೂಡಿಕೆಗಳಿಲ್ಲದೆ ಲಾಭ ಕಂಡುಕೊಳ್ಳುತ್ತಿದ್ದಾರೆ ಎಂದು ಅವರಿಗೆ ಅನಿಸಿದೆ. ವಿಜಯ್ ನಾಯರ್ ನಂತರ ಸಮೀರ್‌ಗೆ ಈ ಒಪ್ಪಂದವನ್ನು ತೆಗೆದುಕೊಂಡರೆ, ವಿಜಯ್ ಅವರು ಪೆರ್ನಾಡ್ (ರಿಕಾರ್ಡ್) ವ್ಯವಹಾರವನ್ನು ಪಡೆಯುವುದನ್ನು ಖಚಿತವಾಗಿತ್ತು. ಈ ವ್ಯಕ್ತಿಗಳಿಗೆ ಶೇಕಡಾ 65ರಷ್ಟು ಪಾಲನ್ನು ನೀಡಲು ಸಮೀರ್ ಈ ಮೂಲಕ ಒಪ್ಪಿಕೊಂಡರು. ಈ ವ್ಯಕ್ತಿಗಳೊಂದಿಗಿನ ಮಾತುಕತೆ ಸಂದದರ್ಭದಲ್ಲಿ ಸಮೀರ್ ಅವರು ಎಂಎಸ್ಆರ್ (ಮಗುಂಟಾ ಶ್ರೀನಿವಾಸಲು ರೆಡ್ಡಿ) ಮತ್ತು ಕೆ ಕವಿತಾ ಇಂಡೋ ಸ್ಪಿರಿಟ್ಸ್‌ನ ನಿಜವಾದ ಪಾಲುದಾರರು ಎಂದು ತಿಳಿದುಕೊಂಡರು.

ಅರುಣ್ ಪಿಳ್ಳೈಗೆ ಸಂಬಂಧಿಸಿದಂತೆ, "ಸಮೀರ್ ಮಹೇಂದ್ರು ಅವರೊಂದಿಗಿನ ಸಂವಾದದ ಸಮಯದಲ್ಲಿ ಅವರ ವ್ಯವಹಾರದಲ್ಲಿನ ಶೇಕಡಾ 65ರಷ್ಟು ಷೇರುಗಳ ನಿಯಂತ್ರಣವು ಎಂಎಸ್ಆರ್ ಮತ್ತು ಕೆ ಕವಿತಾ ಅವರಲ್ಲಿರುತ್ತದೆ ಎಂದು ತಿಳಿಸಲಾಯಿತು. ಅರುಣ್ ಪಿಳ್ಳೈ ಅವರು ಕವಿತಾ ಮತ್ತು ಸಮೀರ್ ಮಹೇಂದ್ರು ಅವರೊಂದಿಗೆ ಫೇಸ್‌ಟೈಮ್ ಕರೆಗಳನ್ನು ಏರ್ಪಡಿಸಿದ್ದರು. ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಸಮೀರ್ ಮಹೇಂದ್ರು ಮತ್ತು ಕವಿತಾ ಜೊತೆ ಮಾತುಕತೆ ನಡೆಯಿತು.  ಅಲ್ಲಿ ಸಮೀರ್ ಮಹೇಂದ್ರು ಅವರಿಂದ ಇಂಡೋ ಸ್ಪಿರಿಟ್ಸ್ ವ್ಯವಹಾರದ ನವೀಕರಣವನ್ನು ಕವಿತಾ ಮತ್ತು ಅವರ ಪಾಲುದಾರರು ಪಡೆದರು.

ಕಳೆದ ಅಕ್ಟೋಬರ್ 1ರಂದು ದಿನೇಶ್ ಅರೋರ ನೀಡಿದ್ದ ಹೇಳಿಕೆಯಲ್ಲಿ, ಕವಿತಾ ಪಾಲುದಾರರಾಗಿರುವ ಸೌತ್ ಗ್ರೂಪ್ ನಿಂದ 30-31 ಕೋಟಿ ರೂಪಾಯಿ ಕಿಕ್ ಬ್ಯಾಕ್ ನ್ನು ವರ್ಗಾಯಿಸಲು ತಾವು ಸಹಕಾರ ನೀಡಿರುವುದಾಗಿ ಹೇಳಿಕೊಂಡಿದ್ದರು. ಸೌತ್ ಗ್ರೂಪ್ ನಲ್ಲಿ ಹೈದರಾಬಾದ್ ನಿಂದ ದೆಹಲಿಯವರೆಗೆ ವಿಜಯ್ ನಾಯರ್ ಜೊತೆ ಕವಿತಾಗೆ ವ್ಯವಹಾರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com