ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿಯನ್ನು ಕೊಂದ MQ-9 UAV ಖರೀದಿಸಲು ಭಾರತ ಚಿಂತನೆ

ಹಂಟರ್-ಕಿಲ್ಲರ್ ಮಾನವರಹಿತ ವೈಮಾನಿಕ ವಾಹನಗಳ (UAVs) ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋನ್‌ಗಳನ್ನು ಖರೀದಿಸಲು ಭಾರತವು ಅಮೆರಿಕದೊಂದಿಗೆ ಬಿಲಿಯನ್ ಡಾಲರ್‌ಗಳ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹಂಟರ್-ಕಿಲ್ಲರ್ ಮಾನವರಹಿತ ವೈಮಾನಿಕ ವಾಹನಗಳ (UAVs) ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋನ್‌ಗಳನ್ನು ಖರೀದಿಸಲು ಭಾರತವು ಅಮೆರಿಕದೊಂದಿಗೆ ಬಿಲಿಯನ್ ಡಾಲರ್‌ಗಳ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ. ನಿಖರವಾದ ಸ್ಟ್ರೈಕ್‌ಗಳಿಗೆ ಲೇಸರ್-ಗೈಡೆಡ್ ಹೆಲ್‌ಫೈರ್ ಕ್ಷಿಪಣಿಗಳನ್ನು ಬಳಸುವುದರಿಂದ ಅವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಕೊಲ್ಲಲು ಈ ಡ್ರೋನ್ ನ್ನು ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. 

ನಾಳೆ ನಿಗದಿಯಾಗಿರುವ ರಕ್ಷಣಾ ಸ್ವಾಧೀನ ಮಂಡಳಿ (DAC) ಸಭೆಯಲ್ಲಿ ಚರ್ಚೆಗೆ ಪಟ್ಟಿ ಮಾಡಲಾದ ಪ್ರಸ್ತಾವನೆಗಳಲ್ಲಿ ಎಂಕ್ಯು-9 ರೀಪರ್ ಖರೀದಿಯೂ ಒಂದು ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಕಾರ್ಯದರ್ಶಿ ಮತ್ತು ರಕ್ಷಣಾ ಸಚಿವಾಲಯದ ಇತರ ಉನ್ನತ ಅಧಿಕಾರಿಗಳನ್ನು ಹೊರತುಪಡಿಸಿ ಅವರ ಕಿರಿಯ ಸಚಿವರು ಮತ್ತು ಮೂರು ಸೇವೆಗಳ ಮುಖ್ಯಸ್ಥರನ್ನು ಒಳಗೊಂಡಿರುವ ಡಿಎಸಿಯ ಮುಖ್ಯಸ್ಥರಾಗಿದ್ದಾರೆ.

ಗುಪ್ತಚರ, ಕಣ್ಗಾವಲು, ವಿಚಕ್ಷಣ ಮತ್ತು ನಿಖರ ದಾಳಿಗಳಿಗೆ UAVಯನ್ನು ಬಳಸಲಾಗುತ್ತದೆ. ಇದನ್ನು ಭೂಮಿಯ ಮೇಲಿನ ನಿಲ್ದಾಣ ಮತ್ತು ಹಡಗಿನಿಂದಲೂ ನಿಯಂತ್ರಿಸಬಹುದು. ಮೂಲಗಳ ಪ್ರಕಾರ, ಸರ್ಕಾರವು 30 MQ-9ಗಳನ್ನು - ಮೂರು ಸೇವೆಗಳಿಗೆ ತಲಾ 10ರಂತೆ ಖರೀದಿಸಲು ಯೋಜಿಸಿದೆ.

ಜನರಲ್ ಅಟಾಮಿಕ್ಸ್‌ನಿಂದ ತಯಾರಿಸಲ್ಪಟ್ಟ MQ-9 ರೀಪರ್ ನ್ನು ಸರ್ಕಾರದಿಂದ ಸರ್ಕಾರದ ಒಪ್ಪಂದಗಳಿಗೆ ಅಮೆರಿಕ ಬಳಸುವ ವಿದೇಶಿ ಮಿಲಿಟರಿ ಮಾರಾಟದ ಮಾರ್ಗದ ಮೂಲಕ ಖರೀದಿಸಲಾಗುತ್ತದೆ. ಡ್ರೋನ್ ನ್ನು ಭಾರತದಲ್ಲಿ ತ್ರಿ-ಸೇವೆಯ ಅವಶ್ಯಕತೆ ಎಂದು ಒಪ್ಪಿಕೊಂಡಿದ್ದರೂ, ಒಪ್ಪಂದ ಕೆಲವು ಸಮಯದಿಂದ ಚರ್ಚೆಯಲ್ಲಿದೆ.

ಜನರಲ್ ಅಟಾಮಿಕ್ಸ್ ಯುಎವಿಗಳಿಗೆ ಬಿಡಿಭಾಗಗಳನ್ನು ಮತ್ತು ಸೇವೆಯನ್ನು ಒದಗಿಸುವುದನ್ನು ಮುಂದುವರಿಸುತ್ತದೆ. ಭಾರತೀಯ ನೌಕಾಪಡೆಯು 2017 ರಲ್ಲಿ ಎರಡು MQ-9 ಗಳನ್ನು ಎರಡು ವರ್ಷಗಳ ಗುತ್ತಿಗೆಗೆ ಸ್ವಾಧೀನಪಡಿಸಿಕೊಂಡಿತು. ಹಿಂದೂ ಮಹಾಸಾಗರದಲ್ಲಿ ಕಣ್ಗಾವಲುಗಾಗಿ ಅವುಗಳನ್ನು ನಿರ್ವಹಿಸಲಾಗುತ್ತಿತ್ತು. ಹೆಚ್ಚಿನ ಸಂಖ್ಯೆಯ MQ-9 ರೀಪರ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಭಾರತೀಯ ನೌಕಾಪಡೆಯು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com