ಉತ್ತರ ಭಾರತದಲ್ಲಿ ದಟ್ಟ ಮಂಜು: 3 ದಿನಗಳ ಕಾಲ 279 ರೈಲು, 100 ಕ್ಕೂ ಅಧಿಕ ವಿಮಾನಗಳ ಸಂಚಾರ ವ್ಯತ್ಯಯ

ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ವಾತಾವರಣದ ವೈಪರಿತ್ಯದಿಂದ ದೆಹಲಿ ಒಂದರಲ್ಲೇ 100 ಕ್ಕೂ ಅಧಿಕ ವಿಮಾನಗಳ ವ್ಯತ್ಯಯ ಉಂಟಾಗಿದೆ. 
ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜು
ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜು

ನವದೆಹಲಿ: ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ವಾತಾವರಣದ ವೈಪರಿತ್ಯದಿಂದ ದೆಹಲಿ ಒಂದರಲ್ಲೇ 100 ಕ್ಕೂ ಅಧಿಕ ವಿಮಾನಗಳ ವ್ಯತ್ಯಯ ಉಂಟಾಗಿದೆ. 

ದೆಹಲಿಯಲ್ಲಿ ತೀವ್ರ ಚಳಿ ಇದ್ದು, ವಾತಾವರಣದ ವೈಪರಿತ್ಯದ ಪರಿಣಾಮ ದೆಹಲಿಯಿಂದ ಕಾರ್ಯನಿರ್ವಹಣೆ ಮಾಡಬೇಕಿದ್ದ 100 ಕ್ಕೂ ಹೆಚ್ಚು ವಿಮಾನಗಳ ಸಂಚಾರ ಕನಿಷ್ಟ ಇನ್ನೂ 3 ದಿನಗಳ ಕಾಲ ವ್ಯತ್ಯಯವಾಗಲಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐ ಗೆ ಮಾಹಿತಿ ನೀಡಿದ್ದಾರೆ. 

ವರ್ಷಾಂತ್ಯದ ರಜೆ ದಿನಗಳ ಹಿನ್ನೆಲೆಯಲ್ಲಿ ನವದೆಹಲಿ ವಿಮಾನ ನಿಲ್ದಾಣದಲ್ಲಿ ಜನ ದಟ್ಟಣೆ ಉಂಟಾಗಿದ್ದು ಅದನ್ನು ನಿರ್ವಹಿಸಲಾಗುತ್ತಿದೆ. ಆದರೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿರುವುದರಿಂದ ವಿಮಾನ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಅನನುಕೂಲವಾಗಿದೆ.

ಸಿಎಟಿ-III ಪೂರಕ ಪೈಲಟ್ ಗಳನ್ನು ಕೆಲವು ವಿಮಾನ ಸಂಸ್ಥೆಗಳು ನಿಯೋಜನೆ ಮಾಡದೇ ಇರುವುದೂ ಸಹ ವಿಮಾನಗಳ ವ್ಯತ್ಯಯಕ್ಕೆ ಕಾರಣವಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಲಿಮಿಟೆಡ್ ಪ್ರಯಾಣಿಕರಿಗೆ ತಮ್ಮ ವಿಮಾನಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com