ಮೊಟ್ಟ ಮೊದಲ ಬಾರಿಗೆ ಬಾಳ ಸಂಗಾತಿ ಕುರಿತು ಮನಬಿಚ್ಚಿ ಮಾತನಾಡಿದ ಕಾಂಗ್ರೆಸ್ ಯುವರಾಜ: ಲೈಫ್ ಫಾರ್ಟನರ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದಿಷ್ಟು!

ಭಾರತ್ ಜೋಡೋ ಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ರಾಹುಲ್ ಗಾಂಧಿ ಇದೀಗ ಹಲವು ವೈಯುಕ್ತಿಕ ಜೀವನದ ಬಗ್ಗೆ ಮಾಹಿತಿಗಳನ್ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಭಾರತ್ ಜೋಡೋ ಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ರಾಹುಲ್ ಗಾಂಧಿ ಇದೀಗ ಹಲವು ವೈಯುಕ್ತಿಕ ಜೀವನದ ಬಗ್ಗೆ ಮಾಹಿತಿಗಳನ್ ಹಂಚಿಕೊಂಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಾಹುಲ್ ಗಾಂಧಿ ತಮ್ಮ ಬಾಳ ಸಂಗಾತಿ ಕುರಿತು ಕೆಲ ಮಾತುಗಳನ್ನಾಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಮುನ್ನೆಡೆಸುತ್ತಿರುವ 52 ವರ್ಷದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳ ಮಿಶ್ರಣವನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನದಲ್ಲಿ ನೆಲೆಸಲು ನಾನು ಬಯಸುತ್ತೇನೆ ಎಂದು  ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ನಡುವಿನ ಸಂದರ್ಶಗಳಲ್ಲಿ ರಾಹುಲ್ ಗಾಂಧಿ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ತಮ್ಮ ಬಾಳಸಂಗಾತಿ ಕುರಿತು ಮಾಹಿತಿಯೂ ಸೇರಿದೆ. ಬಾಳ ಸಂಗಾತಿ ಜೊತೆ ಜೀವನ ನಡೆಸಲು ಇಚ್ಚೀಸುತ್ತೀರಾ? ನಿಮ್ಮ ಸಂಗಾತಿ ಹೇಗಿರಬೇಕು ಎಂದು ಸಂದರ್ಶಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಪ್ರಮುಖವಾಗಿ ಹುಡುಗಿಯಲ್ಲಿ ಎರಡು ಗುಣಗಳಿರಬೇಕು. ಒಂದು ನನ್ನ ತಾಯಿ ಸೋನಿಯಾ ಗಾಂಧಿ ಹಾಗೂ ಮತ್ತೊಂದು ನನ್ನ ಅಜ್ಜಿ ಇಂದಿರಾ ಗಾಂಧಿ ಗುಣಗಳಿರುವ ಹುಡುಗಿಗೆ ಅದ್ಯತೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದಿರಾ ಗಾಂಧಿಯನ್ನು ಕರೆಯುತ್ತಿದ್ದ ಐರನ್ ಲೇಡಿ ಹೆಸರಿನ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದಾರೆ. ಇಂದಿರಾ ಗಾಂಧಿಯನ್ನು ಗುಂಗಿ ಗುಡಿಯಾ ಎಂದು ಕರೆದಿದ್ದಾರೆ. ಬಳಿಕ ಅದೇ ಜನ ಐರನ್ ಲೇಡಿ ಎಂದು ಕರೆದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ತಾಯಿ ಹಾಗೂ ಅಜ್ಜಿ ಜೊತೆಗಿನ ಸಂಬಂಧ ಹೇಗಿತ್ತು ಅನ್ನೋ ಪ್ರಶ್ನೆಗೆ ಲವ್ ಆಫ್ ಮೈ ಲಫ್ ಎಂದು ಉತ್ತರಿಸಿದ್ದಾರೆ.

ರಾಹುಲ್ ಗಾಂಧಿ ಉತ್ತರ ಬೆನ್ನಲ್ಲೇ, ನೀವು  ಬಾಳ ಸಂಗಾತಿ ಜೊತೆ ಜೀವನ ನಡೆಸಲು ಇಚ್ಚೀಸುತ್ತೀರಾ, ಅಥವಾ ನಿಮ್ಮ ಸಂಗಾತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದು ಆಸಕ್ತಿಕರ ಪ್ರಶ್ನೆ ಎಂದು ನಗೆಗಡಲಲ್ಲಿ ತೇಲಾಡಿದ ರಾಹುಲ್ ಗಾಂಧಿ, ಹುಡುಗಿಗೆ ಇತರ ಯಾವೆಲ್ಲಾ ಗುಣಗಳಿವೆ ಅನ್ನೋದನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನನ್ನ ತಾಯಿ ಹಾಗೂ ಅಜ್ಜಿಯ ಗುಣಗಳಿರುವ ಹುಡುಗಿಗೆ ಅದ್ಯತೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಇದೇ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಸಂದರ್ಶನವನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ರಾಹುಲ್ ಗಾಂಧಿ ಬಾಳ ಸಂಗಾತಿ ಕುರಿತು ನೀಡಿರುವ ಹೇಳಿಕೆ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com