'ನನ್ನ ತಾಯಿ ಎಷ್ಟು ಸರಳವೋ ಅಷ್ಟೇ ವಿಶಿಷ್ಟ, 100ನೇ ಹುಟ್ಟುಹಬ್ಬದಂದು ಭೇಟಿಯಾಗಿದ್ದಾಗ ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ನಡೆಸು ಎಂದಿದ್ದರು': ಪ್ರಧಾನಿ ಮೋದಿ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಡಿಸೆಂಬರ್ 30, 2022ರಂದು ತಮ್ಮ 100ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಮರಣ ಕಂಡಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಗುಜರಾತ್ ನ ಅಹಮದಾಬಾದ್ ನ ಗಾಂಧಿನಗರದ ಸೆಕ್ಟರ್ 30 ರಲ್ಲಿ ನೆರವೇರಿಸಲಾಯಿತು.
ಪ್ರಧಾನಿ ಮೋದಿ ತಾಯಿಯ ಆಶೀರ್ವಾದ ಪಡೆದುಕೊಳ್ಳುತ್ತಿರುವ ಸಂಗ್ರಹ ಚಿತ್ರ
ಪ್ರಧಾನಿ ಮೋದಿ ತಾಯಿಯ ಆಶೀರ್ವಾದ ಪಡೆದುಕೊಳ್ಳುತ್ತಿರುವ ಸಂಗ್ರಹ ಚಿತ್ರ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಡಿಸೆಂಬರ್ 30, 2022ರಂದು ತಮ್ಮ 100ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಮರಣ ಕಂಡಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಗುಜರಾತ್ ನ ಅಹಮದಾಬಾದ್ ನ ಗಾಂಧಿನಗರದ ಸೆಕ್ಟರ್ 30 ರಲ್ಲಿ ನೆರವೇರಿಸಲಾಯಿತು. 

ಪ್ರಧಾನಿ ಮೋದಿ ಮತ್ತು ಹೀರಾಬೆನ್ ಮೋದಿಯವರ ತಾಯಿ-ಮಗನ ಸಂಬಂಧ ಅನನ್ಯವಾದದ್ದು. ಹಲವು ಬಾರಿ ಅದು ಸಾದರವಾಗುತ್ತಿತ್ತು. ದೇಶದ ಪ್ರಧಾನ ಮಂತ್ರಿಯಾದ ನಂತರವೂ ತಮ್ಮ ಒತ್ತಡದ ಜೀವನ, ಕೆಲಸಕಾರ್ಯಗಳ ಮಧ್ಯೆ ಸಮಯ ಮಾಡಿಕೊಂಡು ಆಗಾಗ ಮೋದಿಯವರು ತಮ್ಮ ತಾಯಿಯನ್ನು ಭೇಟಿ ಮಾಡಿ ಅವರ ಆರೋಗ್ಯ, ಕುಶಲಗಳನ್ನು ವಿಚಾರಿಸುತ್ತಿದ್ದರು.


ಇಂದು ತಾಯಿಯ ನಿಧನ ಬಳಿಕ ಪ್ರಧಾನಿ ಮೋದಿಯವರು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.  “ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ… ತಾಯಿಯಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನ. ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ ಯಾವಾಗಲೂ ನೆನಪಿಸಿಕೊಳ್ಳುವ ಒಂದು ಮಾತನ್ನು ಹೇಳಿದ್ದರುಛ ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧವಾಗಿ ಜೀವನ ನಡೆಸು' ಎಂದು.

ಕಳೆದ ಜುಲೈ 12ರಂದು ಹೀರಾಬೆನ್ ಅವರು 99 ವರ್ಷಗಳನ್ನು ಪೂರೈಸಿ 100ನೇ ವಸಂತಕ್ಕೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬ್ಲಾಗ್ ಬರೆದಿದ್ದರು. ಅದರ ಒಕ್ಕಣೆ ಹೀಗಿದೆ: 

"ತಾಯಿ - ಇದು ಅರ್ಥಕೋಶದಲ್ಲಿ ಕೇವಲ ಬೇರೆ ಪದ ಮಾತ್ರವಲ್ಲ. ಇದು ಭಾವನೆಗಳ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಿದೆ - ಪ್ರೀತಿ, ತಾಳ್ಮೆ, ನಂಬಿಕೆ ಮತ್ತು ಅದಕ್ಕೂ ಹೆಚ್ಚಿನದ್ದು. ಪ್ರಪಂಚದಾದ್ಯಂತ, ದೇಶ ಅಥವಾ ಪ್ರದೇಶವನ್ನು ಲೆಕ್ಕಿಸದೆ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ, ಈ ಪಯಣದ ಹಾದಿಯಲ್ಲಿ ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ.

ಇಂದು, ನನ್ನ ತಾಯಿ ಶ್ರೀಮತಿ ಹೀರಾಬಾ ತನ್ನ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನಾನು ಅತ್ಯಂತ ಸಂತೋಷ ಮತ್ತು ಅದೃಷ್ಟ ಹೊಂದಿದ್ದೇನೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷ. ನನ್ನ ತಂದೆ ಬದುಕಿದ್ದರೆ, ಅವರು ಕೂಡ ಕಳೆದ ವಾರ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ನನ್ನ ತಾಯಿಯ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿರುವ ಕಾರಣ 2022 ಒಂದು ವಿಶೇಷ ವರ್ಷವಾಗಿದೆ, ಇಂದು ತಂದೆ ಇರುತ್ತಿದ್ದರೆ ಶತಾಯುಷ್ಯವನ್ನು ಪೂರ್ಣಮಾಡುತ್ತಿದ್ದರು.

ಕಳೆದ ವಾರವಷ್ಟೇ, ನನ್ನ ಸೋದರಳಿಯ ಗಾಂಧಿನಗರದಲ್ಲಿರುವ ನನ್ನ ತಾಯಿಯ ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಸಮಾಜದ ಕೆಲವು ಯುವಕರು ಮನೆಗೆ ಬಂದಿದ್ದರು, ನನ್ನ ತಂದೆಯ ಛಾಯಾಚಿತ್ರವನ್ನು ಕುರ್ಚಿಯ ಮೇಲೆ ಇರಿಸಲಾಗಿತ್ತು, ಕೀರ್ತನೆ ಹೇಳುತ್ತಿದ್ದರು. ತಾಯಿ ಮಂಜೀರ ನುಡಿಸುತ್ತಾ ಭಜನೆ ಹಾಡುವುದರಲ್ಲಿ ಮಗ್ನರಾಗಿದ್ದರು. ತಾಯಿಯ ವಯಸ್ಸು ದೈಹಿಕವಾಗಿ ಕುಗ್ಗಿರಬಹುದು, ಆದರೆ ಎಂದಿನಂತೆ ಮಾನಸಿಕವಾಗಿ ಜಾಗರೂಕರಾಗಿದ್ದಾರೆ. 

ಹಿಂದೆ ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೆ, ನನ್ನ ತಂದೆಯ ಜನ್ಮದಿನದಂದು ಅವರ ನೆನಪಿಗಾಗಿ ಮಕ್ಕಳು 100 ಗಿಡಗಳನ್ನು ನೆಟ್ಟರು.

ನನ್ನ ಜೀವನದಲ್ಲಿ ಒಳ್ಳೆಯದು ಮತ್ತು ನನ್ನ ಪಾತ್ರದಲ್ಲಿ ಒಳ್ಳೆಯದೆಲ್ಲವೂ ಆಗಿದ್ದರೆ ಹೆತ್ತವರು ಕಾರಣವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು, ನಾನು ದೆಹಲಿಯಲ್ಲಿ ಕುಳಿತಾಗ ಹಿಂದಿನದ್ದೆಲ್ಲ ನೆನಪಿಗೆ ಬರುತ್ತವೆ. 

ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ. ಎಲ್ಲಾ ತಾಯಂದಿರಂತೆ ನಾನು ನನ್ನ ತಾಯಿಯ ಬಗ್ಗೆ ಬರೆಯುವಾಗ, ನಿಮ್ಮಲ್ಲಿ ಅನೇಕರು ಅವರ ತಾಯಿಯನ್ನು ಸಂಬಂಧ ಹೋಲಿಕೆ ಮಾಡಿಕೊಳ್ಳಬಹುದು.. ಓದುವಾಗ, ನಿಮಗೆ ನಿಮ್ಮ ತಾಯಿಯ ವ್ಯಕ್ತಿತ್ವ, ಚಿತ್ರ ಸ್ಮೃತಿಪಟಲದಲ್ಲಿ ಬಂದಿರಬಹುದು ಎಂದು ಪ್ರಧಾನಿ ಮೋದಿ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com