ದಲೈಲಾಮ ಮೇಲೆ ಬೇಹುಗಾರಿಕೆ: ಬೋಧ್ ಗಯಾದಲ್ಲಿ ಚೀನಾ ಮಹಿಳೆ ಬಂಧನ

ದಲೈ ಲಾಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಡಿ ಬೋಧ್ ಗಯಾದಲ್ಲಿ ಚೀನಾ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. 
ದಲೈ ಲಾಮ-ಬಂಧಿತ ಚೀನಾ ಮಹಿಳೆಯ ರೇಖಾ ಚಿತ್ರ
ದಲೈ ಲಾಮ-ಬಂಧಿತ ಚೀನಾ ಮಹಿಳೆಯ ರೇಖಾ ಚಿತ್ರ

ಪಾಟ್ನ: ದಲೈ ಲಾಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಡಿ ಬೋಧ್ ಗಯಾದಲ್ಲಿ ಚೀನಾ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. 

ಈ ಮಹಿಳೆ ಬಗ್ಗೆ ಗುಪ್ತಚರ ಇಲಾಖೆ ಅಲರ್ಟ್ ನೀಡಿದ್ದ ಒಂದೇ ದಿನದಲ್ಲಿ ಆಕೆಯನ್ನು ಬಂಧಿಸಲಾಗಿದೆ. ಪಾಟ್ನಾ ಪೊಲೀಸ್ ಅಧಿಕಾರಿಗಳ ಪ್ರಕಾರ, ಕಾನೂನು ಪ್ರಕ್ರಿಯೆಗಳ ನಂತರ ಆಕೆಯನ್ನು ಚೀನಾಗೆ ಗಡಿಪಾರು ಮಾಡುವ ವ್ಯವಸ್ಥೆ ನಡೆಯುತ್ತದೆ. ಇದಕ್ಕೂ ಮುನ್ನ ಆಕೆಯನ್ನು ಹಲವು ಗುಪ್ತಚರ ಇಲಾಖೆಯ  ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಹೆಚ್ಚುವರಿ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗ್ವಾರ್ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಬಂಧಿತ ಮಹಿಳೆಯನ್ನು ಸಾಂಗ್ ಷಿಯೋಲಾನ್ ಎಂದು ಗುರುತಿಸಲಾಗಿದ್ದು ದಲೈ ಲಾಮ ಅವರು ಭಾಗವಹಿಸಿದ್ದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಬೋಧ್ ಗಯಾದ ಕಾಲ್ ಚಕ್ರ ಮೈದಾನದಲ್ಲಿ ಪತ್ತೆ ಮಾಡಲಾಗಿತ್ತು.
 
ರಾಜ್ಯದಲ್ಲಿ ಆಕೆ ಬೇರೆಲ್ಲಾದರೂ ಭೇಟಿ ನೀಡಿದ್ದಾಳೆಯೇ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ದಲೈ ಲಾಮ ಅವರ ಭಕ್ತೆಯಂತೆ ನಟಿಸುತ್ತಿದ್ದ ಆಕೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತಿದ್ದಳು ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಇದಕ್ಕೂ ಮುನ್ನ ಗುಪ್ತಚರ ಇಲಾಖೆಯ ಅಲರ್ಟ್ ಹಿನ್ನೆಲೆಯಲ್ಲಿ ದಲೈ ಲಾಮ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಬಂಧಿತ ವ್ಯಕ್ತಿ ಕಳೆದ ಒಂದು ವರ್ಷದಿಂದ ಬೋಧ್ ಗಯಾದಲ್ಲೇ ಇದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com