ರಾಷ್ಟ್ರೀಯ ಭದ್ರತೆಗೆ ಅಪಾಯ: ಲಕ್ಷ ದ್ವೀಪ ಆಡಳಿತದಿಂದ 17 ದ್ವೀಪಗಳಿಗೆ ಪ್ರವೇಶ ನಿರ್ಬಂಧ

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 36 ದ್ವೀಪಗಳ ಪೈಕಿ 17 ದ್ವೀಪಗಳಿಗೆ ಪ್ರವೇಶವನ್ನು ಲಕ್ಷದ್ವೀಪ ಆಡಳಿತ  ನಿಷೇಧಿಸಿದೆ. ಇವು ಜನವಸತಿಯಿಲ್ಲದ ದ್ವೀಪಗಳಾಗಿದ್ದು,  ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ನಿಂದ ಪ್ರವೇಶಕ್ಕೆ ಅನುಮತಿ ಅಗತ್ಯವಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕವರತ್ತಿ: ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 36 ದ್ವೀಪಗಳ ಪೈಕಿ 17 ದ್ವೀಪಗಳಿಗೆ ಪ್ರವೇಶವನ್ನು ಲಕ್ಷದ್ವೀಪ ಆಡಳಿತ  ನಿಷೇಧಿಸಿದೆ. ಇವು ಜನವಸತಿಯಿಲ್ಲದ ದ್ವೀಪಗಳಾಗಿದ್ದು,  ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ನಿಂದ ಪ್ರವೇಶಕ್ಕೆ ಅನುಮತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಲಕ್ಷದ್ವೀಪ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಘೋಷಣೆ ಹೊರಡಿಸಿದ್ದಾರೆ.

ತೆಂಗಿನಕಾಯಿ ಕೊಯ್ಲು ಮಾಡುವ ಕಾರ್ಮಿಕರ ಮನೆಗಳಂತೆ ತಾತ್ಕಾಲಿಕ ರಚನೆಗಳನ್ನು ಹೊಂದಿರುವ ಜನವಸತಿಯಿಲ್ಲದ ದ್ವೀಪಗಳಲ್ಲಿ ಭಯೋತ್ಪಾದಕ ಅಥವಾ ಕಳ್ಳಸಾಗಣೆ ಚಟುವಟಿಕೆಗಳನ್ನು ತಡೆಯಲು ಬುಧವಾರ ಈ ಘೋಷಣೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅವರಲ್ಲಿ  ಕಾನೂನುಬಾಹಿರ, ಸಮಾಜವಿರೋಧಿ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸೇರಬಹುದು ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಹೇಳಿದೆ.

ಕೆಲವು ಜನವಸತಿಯಿಲ್ಲದ ದ್ವೀಪಗಳಲ್ಲಿ ತೆಂಗಿನಕಾಯಿ ಕೊಯ್ಲು ಕಾರ್ಮಿಕರ ವಸತಿ ಉದ್ದೇಶಕ್ಕಾಗಿ ತಾತ್ಕಾಲಿಕ ಕಟ್ಟಡಗಳು ಇರುವುದರಿಂದ ಈ ಕಾರ್ಮಿಕರೊಂದಿಗೆ ಅಕ್ರಮ, ಸಮಾಜ ವಿರೋಧಿ ಮತ್ತು ಕಳ್ಳಸಾಗಾಣಿಕೆಯಂತಹ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಇದ್ದಾರೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭಯೋತ್ಪಾದಕ ಗುಂಪುಗಳು ಅಥವಾ ಸಂಘಟನೆಗಳು ದೇಶದ ಪ್ರಮುಖ ಸಂಸ್ಥೆಗಳು ಮತ್ತು ಜನನಿಬಿಡ ಸ್ಥಳಗಳ ಮೇಲೆ ದಾಳಿ ಮಾಡುವ ಸಾಧ್ಯತೆಯನ್ನು ಪರಿಗಣಿಸಿ, ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com