ತಿರುಚಿದ ಭಾರತದ ಭೂಪಟ: ವಾಟ್ಸ್ ಆಪ್ ಗೆ ಐಟಿ ಸಚಿವರ ಕ್ಲಾಸ್!

ತಿರುಚಿದ ಭಾರತದ ಭೂಪಟವನ್ನು ಟ್ವೀಟ್ ಮಾಡಿದ್ದಕ್ಕಾಗಿ ವಾಟ್ಸ್ ಆಪ್ ನ್ನು ಐಟಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. 
ವಾಟ್ಸಾಪ್
ವಾಟ್ಸಾಪ್

ನವದೆಹಲಿ: ತಿರುಚಿದ ಭಾರತದ ಭೂಪಟವನ್ನು ಟ್ವೀಟ್ ಮಾಡಿದ್ದಕ್ಕಾಗಿ ವಾಟ್ಸ್ ಆಪ್ ನ್ನು ಐಟಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಆಗಿರುವ ತಪ್ಪನ್ನು ತಕ್ಷಣವೇ ಸರಿಪಡಿಸುವುದಕ್ಕೆ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಮೆಸೇಜಿಂಗ್ ಆಪ್ ತಪ್ಪನ್ನು ಸರಿಪಡಿಸಿಕೊಂಡಿದ್ದು, ಕ್ಷಮೆ ಕೋರಿದೆ. ಭಾರತದಲ್ಲಿ ಉದ್ಯಮವನ್ನು ನಡೆಸುವ/ ಉದ್ಯಮವನ್ನು ಮುಂದುವರೆಸಲು ಬಯಸುವ ಎಲ್ಲಾ ಸಂಸ್ಥೆಗಳು ಭಾರತದ ಸರಿಯಾದ ಭೂಪಟವನ್ನು ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ.
 
ಆತ್ಮೀಯ ವಾಟ್ಸ್ ಆಪ್, ಹೊಸ ವರ್ಷಕ್ಕೆ ತಮ್ಮ ಸಂಸ್ಥೆಯ ಟ್ವೀಟ್ ನಲ್ಲಿ ಭಾರತದ ಭೂಪಟ ತಪ್ಪಾಗಿ ಪ್ರಕಟಗೊಂಡಿದ್ದು, ತಕ್ಷಣವೇ ಅದನ್ನು ಸರಿಪಡಿಸಿ ಎಂದು ಟ್ವೀಟ್ ಮಾಡಿದ್ದರು. ಹೊಸ ವರ್ಷಕ್ಕೆ ಶುಭಾಶಯ ಕೋರಿ ವಾಟ್ಸ್ ಆಪ್ ಮಾಡಿದ್ದ ಟ್ವೀಟ್ ನಲ್ಲಿದ್ದ ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರದ ಪ್ರದೇಶ ತಪ್ಪಾಗಿ ಮುದ್ರಣಗೊಂಡಿತ್ತು

ಸಚಿವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ವಾಟ್ಸ್ ಆಪ್ ಸಂಸ್ಥೆ ಇದು ಉದ್ದೇಶಪೂರ್ವಕವಾಗಿ ಆಗಿರುವ ತಪ್ಪಲ್ಲ, ತಪ್ಪನ್ನು ತೋರಿಸಿ ಎಚ್ಚರಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com