ಉದಯಪುರ ಟೈಲರ್ ಹತ್ಯೆ ಆರೋಪಿಗೂ ಮುಂಬೈ ಉಗ್ರರ ದಾಳಿ ದಿನಾಂಕಕ್ಕೂ ಏನಿದು ನಂಟು?

ಉದಯ ಪುರ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಆರೋಪಿ ರಿಯಾಜ್ ಅಠಾರಿಯ ಬೈಕ್ ಗೂ ಮುಂಬೈ ಉಗ್ರರ ದಾಳಿಗೂ ನಂಟಿರುವುದು ಬಹಿರಂಗವಾಗಿದೆ.
ಆರೋಪಿ ರಿಯಾಜ್ ಬೈಕ್ ಮೇಲಿನ ನಂಬರ್ ಪ್ಲೇಟ್
ಆರೋಪಿ ರಿಯಾಜ್ ಬೈಕ್ ಮೇಲಿನ ನಂಬರ್ ಪ್ಲೇಟ್
Updated on

ಜೈಪುರ: ಉದಯ ಪುರ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಆರೋಪಿ ರಿಯಾಜ್ ಅಠಾರಿಯ ಬೈಕ್ ಗೂ ಮುಂಬೈ ಉಗ್ರರ ದಾಳಿಗೂ ನಂಟಿರುವುದು ಬಹಿರಂಗವಾಗಿದೆ.

ರಿಯಾಜ್ ಬೈಕ್ ನಂಬರ್ ಪ್ಲೇಟ್ ಆರ್ ಜೆ 27 ಎ ಎಸ್ 2611 ಆಗಿದ್ದು, ನವೆಂಬರ್ 26, 2008 ರಂದು ನಡೆದ ಮುಂಬೈ ಉಗ್ರರ ಮೇಲಿನ ದಾಳಿಯನ್ನು ನೆನಪಿಸುತ್ತಿದೆ.

ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೈಕ್ ಖರೀದಿ ಮತ್ತು ಆರೋಪಿ ಹೇಗೆ ಆ ರೀತಿಯ ವಿಶೇಷ ನಂಬರ್ ಪಡೆದ ಎಂಬುದರ ಬಗ್ಗೆಯೂ ವಿಷಯ ಸಂಗ್ರಹಿಸಲಾಗುತ್ತಿದೆ. 2013ರಲ್ಲಿ ಹೆಚ್ಚುವರಿಯಾಗಿ ರೂ. 5,000 ಪಾವತಿಸಿದ ನಂತರ 2611 ಬೈಕ್ ನಂಬರ್ ಪಡೆಯಲಾಗಿದೆ ಎಂದು ವರದಿಯಾಗಿದೆ.

ಜೂನ್ 29 ರಂದು ಟೈಲರ್ ಕನ್ಹಾಯ್ಯ ಲಾಲ್ ಹತ್ಯೆ ನಂತರ ಆರೋಪಿ ಇದೇ ಬೈಕ್ ನಲ್ಲಿ ಪರಾರಿಯಾಗಿದ್ದಾನೆ ಆದರೆ ತದನಂತರ ಭೀಮಾ ಟೌನ್ ನಲ್ಲಿ ರಾಜ್ ಸಮಂದ್ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾನೆ. ಆರೋಪಿಯ ಬೈಕ್ ನಂಬರ್ ಗೂ, ಮುಂಬೈ ಉಗ್ರರ ದಾಳಿಗೂ ಇರುವ ಸಂಬಂಧವಾದರೂ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com