ಸೇತುವೆಯಿಂದ ಗಂಗಾ ನದಿಗೆ ಹಾರಿದ ಅಜ್ಜಿ: ವಿಡಿಯೋ ನೋಡಿ 'ಅಜ್ಜಿಗೆ ಸಲಾಂ' ಎಂದು ಟ್ವೀಟರಿಗರು!

ಗಂಗಾ ನದಿಗೆ ಧುಮುಕುವ ಸಾಹಸವನ್ನು ಯುವಕರು ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಅಪಾಯಕಾರಿ ಸಾಹಸವನ್ನು ಓರ್ವ ವಯಸ್ಸಾದ ಅಜ್ಜಿ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ನವದೆಹಲಿ: ಗಂಗಾ ನದಿಗೆ ಧುಮುಕುವ ಸಾಹಸವನ್ನು ಯುವಕರು ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಅಪಾಯಕಾರಿ ಸಾಹಸವನ್ನು ಓರ್ವ ವಯಸ್ಸಾದ ಅಜ್ಜಿ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಅಜ್ಜಿಯ ಈ ಸಾಹಸ ನಿಮ್ಮನ್ನು ಬೆರಗುಗೊಳಿಸುತ್ತದೆ. ಯಾವುದೇ ಭಯವಿಲ್ಲದೆ ನದಿಗೆ ಹಾರಿದ ಈ ವೃದ್ಧೆಯ ವಿಡಿಯೋ ವೈರಲ್. 24 ಸೆಕೆಂಡ್‌ಗಳ ವೀಡಿಯೊ ಕ್ಲಿಪ್‌ನಲ್ಲಿ ವಯಸ್ಸಾದ ಮಹಿಳೆಯೊಬ್ಬರು ಸೇತುವೆಯಿಂದ ಗಂಗಾನದಿಗೆ ಜಿಗಿಯುವ ಮೊದಲು ರೇಲಿಂಗ್ ಅನ್ನು ಹಿಡಿದುಕೊಂಡು ತಯಾರಿ ನಡೆಸುತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಅವಳು ಯಾವುದೇ ಭಯವಿಲ್ಲದೆ ನದಿಗೆ ಧುಮುಕುತ್ತಾರೆ.

ನದಿಗೆ ಜಿಗಿದ ಮಹಿಳೆ ಸ್ವಲ್ಪ ಸಮಯದವರೆಗೆ ಈಜಿ ದಡ ಸೇರಿದರು. ವೀಡಿಯೊವನ್ನು ಹಲವಾರು ಬಾರಿ ಹಂಚಿಕೊಂಡಿದ್ದು, ಅನೇಕ ಲೈಕ್‌ಗಳು ಮತ್ತು ಟ್ವೀಟ್‌ಗಳನ್ನು ಪಡೆದುಕೊಂಡಿದೆ.

ಟ್ವಿಟರ್‌ನಲ್ಲಿ ವಯಸ್ಸಾದ ಮಹಿಳೆ ನಿರ್ಭಯ ಎಂಬ ಕಾಮೆಂಟ್‌ಗಳಿಂದ ತುಂಬಿತ್ತು. ನೆಟಿಜನ್‌ಗಳು ಬೆಚ್ಚಿಬಿದ್ದು, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com