ಡ್ರಮ್ ಬಾರಿಸಿ ಪತಿ ಸಿಎಂ ಏಕನಾಥ್ ಶಿಂಧೆ ಸ್ವಾಗತಿಸಿದ ಪತ್ನಿ, ವಿಡಿಯೋ!

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಏಕನಾಥ್ ಶಿಂಧೆ ತಮ್ಮ ತವರುಕ್ಷೇತ್ರ ಥಾಣೆಗೆ ಆಗಮಿಸುತ್ತಿದ್ದಂತೆ ಅವರ ಪತ್ನಿ ಲತಾ ಏಕನಾಥ್ ಶಿಂಧೆ ಅವರು ಡ್ರಮ್ ಬಾರಿಸುವ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ.
ಏಕನಾಥ ಶಿಂಧೆ
ಏಕನಾಥ ಶಿಂಧೆ
Updated on

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಏಕನಾಥ್ ಶಿಂಧೆ ತಮ್ಮ ತವರುಕ್ಷೇತ್ರ ಥಾಣೆಗೆ ಆಗಮಿಸುತ್ತಿದ್ದಂತೆ ಅವರ ಪತ್ನಿ ಲತಾ ಏಕನಾಥ್ ಶಿಂಧೆ ಅವರು ಡ್ರಮ್ ಬಾರಿಸುವ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ.

ಲತಾ ಶಿಂಧೆ ಅವರು ಮುಖ್ಯಮಂತ್ರಿಗಳ ಮನೆಯಲ್ಲಿ ಬ್ಯಾಂಡ್‌ನೊಂದಿಗೆ ಡ್ರಮ್ ಬಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಮೂರು ವಾರಗಳ ಹಿಂದೆ ಶಿವಸೇನೆ ಬಂಡಾಯಗಾರನಾಗಿ ಠಾಕ್ರೆ ಸರ್ಕಾರ ತೊರೆದು ಶಿಂಧೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಮನೆಗೆ ತೆರಳಿದರು.

ಕಳೆದ ರಾತ್ರಿ 9.30ರ ಸುಮಾರಿಗೆ ಥಾಣೆಗೆ ಆಗಮಿಸುತ್ತಿದ್ದಂತೆ ಆನಂದನಗರದಲ್ಲಿ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿ ಅವರ ಕಾರಿನ ಮೇಲೆ ಪುಷ್ಪವೃಷ್ಟಿ ಮಾಡಿದರು. ಅವರನ್ನು ಸ್ವಾಗತಿಸಲು ಜನಸಮೂಹವು ಭಾರೀ ಮಳೆಯಲ್ಲಿ ಹಲವಾರು ಗಂಟೆಗಳ ಕಾಲ ಕಾದಿತ್ತು.

ಶಿಂಧೆ ಅವರು ಶಿವಸೇನೆಯ ಐಕಾನ್ ಆನಂದ್ ದಿಘೆ ಅವರಿಗೆ ಆನಂದ್ ದಿಘೆ ಶಕ್ತಿಸ್ಥಳ ಮತ್ತು ಆನಂದ ಆಶ್ರಮದಲ್ಲಿ ಗೌರವ ಸಲ್ಲಿಸಿದರು. ಭೇಟಿಯ ವೇಳೆ ಮಾತನಾಡಿದ ಶಿಂಧೆ, ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ತಮ್ಮ ಬಂಡಾಯವೇಳಲಾಯಿತು ಎಂದರು.

ಆಟೋರಿಕ್ಷಾ ಚಾಲಕರಾಗಿದ್ದ ಏಕನಾಥ್ ಶಿಂಧೆ ಅವರು ಸಿಎಂ ಆಗೋವರೆಗೂ ಬೆಳೆದು ಬಂದ ಹಾದಿಯಲ್ಲಿ ಅವರ ಸಿಎಂ ಪತ್ನಿ ಲತಾ ಶಿಂಧೆ ಅವರ ಪಾತ್ರ ಬಲವಾಗಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದರು. 2000 ರಲ್ಲಿ ದೋಣಿ ಅಪಘಾತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದರು. ಇದನ್ನು ನೆನೆದು ಸಿಎಂ ಶಿಂಧೆ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಭಾವುಕರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com