ನವದೆಹಲಿ: ಆಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ರೂಪಾಯಿ ದಂಡವನ್ನು ಜಾರಿ ನಿರ್ದೇಶನಾಲಯ(ಇಡಿ) ವಿಧಿಸಿದೆ.
ಆಮ್ನೆಸ್ಟಿ ಇಂಟರ್‌ನ್ಯಾಶನಲ್, ಯುಕೆಯು ಎಫ್‌ಡಿಐ ಮಾರ್ಗವನ್ನು ಅನುಸರಿಸಿ ತನ್ನ ಭಾರತೀಯ ಘಟಕಗಳ ಮೂಲಕ(ಎಫ್‌ಸಿಆರ್‌ಎ ಅಲ್ಲದ ಕಂಪನಿಗಳು) 'ದೊಡ್ಡ ಮೊತ್ತದ' ವಿದೇಶಿ ಕೊಡುಗೆಯನ್ನು ರವಾನಿಸುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಫೆಡರಲ್ ಏಜೆನ್ಸಿ ಹೇಳಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಿಂದ(FCRA) ತಪ್ಪಿಸಿಕೊಳ್ಳಲು ಉದ್ದೇಶದಿಂದ ಭಾರತದಲ್ಲಿ ತನ್ನ NGO ಚಟುವಟಿಕೆಗಳನ್ನು ವಿಸ್ತರಿಸಿತ್ತು ಎಂಬ ಆರೋಪವಿದೆ.
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ (ಎಐಐಎಫ್‌ಟಿ) ಮತ್ತು ಎಫ್‌ಸಿಆರ್‌ಎ ಅಡಿಯಲ್ಲಿರುವ ಇತರ ಟ್ರಸ್ಟ್‌ಗಳಿಗೆ ಗೃಹ ವ್ಯವಹಾರಗಳ ಸಚಿವಾಲಯವು ಪೂರ್ವ ನೋಂದಣಿ ಅಥವಾ ಅನುಮತಿಗಳನ್ನು ನಿರಾಕರಿಸಿದ ಹೊರತಾಗಿಯೂ ಇದು ನಡೆದಿದೆ ಎಂದು ಇಡಿ ಹೇಳಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(FEMA) ನಿಬಂಧನೆಗಳನ್ನು ಉಲ್ಲಂಘಿಸಿ ಹಣವನ್ನು ಸ್ವೀಕರಿಸಿದ ಕಾರಣ ದಂಡದ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
Advertisement