ನವದೆಹಲಿ: ಸ್ವಿಗ್ಗಿ ಡೆಲಿವರಿ ಏಜೆಂಟ್ ಎಂದಾದರೂ ಕುದುರೆ ಮೇಲೆ ಬಂದು ನಿಮಗೆ ಆಹಾರ ಪೂರೈಸಿದ್ದನ್ನು ಎಂದಾದರೂ ಕಂಡಿದ್ದೀರಾ? ಇತ್ತೀಚೆಗೆ ಕುದುರೆ ಮೇಲೆ ಕುಳಿತ ವ್ಯಕ್ತಿಯೋರ್ವ ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಗುರುತಿಸಿದವರಿಗೆ ಸಂಸ್ಥೆ 5,000 ರೂಪಾಯಿ ಬಹುಮಾನ ಘೋಷಿಸಿದೆ.
ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸ್ವಿಗ್ಗಿ, ಈ ನಿರ್ದಿಷ್ಟ ಕುದುರೆ ಎಂಬ ಶೀರ್ಷಿಕೆ ನೀಡಿದೆ. 6 ಸೆಕೆಂಡ್ ಗಳ ಈ ವಿಡಿಯೋ ಕ್ಲಿಪ್ ನಲ್ಲಿ ವ್ಯಕ್ತಿಯೋರ್ವ ಕುಳಿತಿದ್ದು ಸ್ವಿಗ್ಗಿ ಬ್ಯಾಗ್ ನ್ನು ಹಿಂಬದಿಯಲ್ಲಿ ನೇತುಹಾಕಿಕೊಂಡಿದ್ದಾರೆ. ಮುಂಬೈ ನ ಮಳೆಯಲ್ಲಿ ರಸ್ತೆಗಳ ನಡುವೆ ಸಂಚರಿಸುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ದೆಹಲಿ ಎನ್ ಸಿಆರ್ ನಲ್ಲಿಯೂ ಈ ರೀತಿಯ ಡೆಲಿವರಿ ಸೇವೆಗಳನ್ನು ಒದಗಿಸಿ, ಬಿಳಿಯ ಕುದುರೆ ಮೇಲೆ ಸ್ವಿಗ್ಗಿ ಡೆಲಿವರಿಯನ್ನು ವರ್ಷಗಟ್ಟಲೆ ನೆನಪಿಡಬಹುದು ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.
Advertisement