
ನವದೆಹಲಿ: 1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಪೋರ್ಚುಗಲ್‌ಗೆ ನೀಡಿದ ಬದ್ಧತೆಯನ್ನು ಗೌರವಿಸಲು ಕೇಂದ್ರ ಸರ್ಕಾರವು ಬದ್ಧವಾಗಿದ್ದು, 25 ವರ್ಷಗಳ ಜೈಲು ಶಿಕ್ಷೆಯನ್ನು ಗ್ಯಾಂಗ್‌ಸ್ಟರ್ ಅಬು ಸಲೇಂ ಪೂರ್ಣಗೊಳಿಸಿದ ನಂತರ ಕೇಂದ್ರ ಸರ್ಕಾರ ಆತನನ್ನು ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2002 ರಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಉಪ ಪ್ರಧಾನಿಯಾಗಿದ್ದಾಗ ಸಲೇಂನ ಹಸ್ತಾಂತರಕ್ಕಾಗಿ ಪೋರ್ಚುಗಲ್‌ಗೆ ಭಾರತ 25 ವರ್ಷಗಳ ಜೈಲುಶಿಕ್ಷೆ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆಗ ನೀಡಿದ್ದ ಭರವಸೆ ಪ್ರಕಾರ, ತನ್ನ ಶಿಕ್ಷೆಯ ಅವಧಿ 25 ವರ್ಷಗಳನ್ನು ಪೂರೈಸಿದ್ದು ಬಿಡುಗಡೆಗೊಳಿಸಬೇಕೆಂದು ನ್ಯಾಯಾಲಯ ಮುಂದೆ ವಕೀಲರ ಮೂಲಕ ಬೇಡಿಕೆಯಿಟ್ಟಿದ್ದನು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ನ್ಯಾಯಪೀಠವು, ರಾಷ್ಟ್ರಪತಿಗಳು ಸಂವಿಧಾನದ 72 ನೇ ವಿಧಿ ಅಡಿಯಲ್ಲಿ ಅಧಿಕಾರ ಚಲಾಯಿಸಲು ಮತ್ತು 25 ವರ್ಷ ಜೈಲುಶಿಕ್ಷೆ ಪೂರೈಸಿದರೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ.
25 ವರ್ಷಗಳು ಪೂರ್ಣಗೊಂಡ ಒಂದು ತಿಂಗಳೊಳಗೆ ಅಗತ್ಯ ದಾಖಲೆಗಳನ್ನು ರವಾನಿಸಲಾಗುತ್ತದೆ. ವಾಸ್ತವವಾಗಿ, 25 ವರ್ಷಗಳು ಪೂರ್ಣಗೊಂಡ ನಂತರ ಒಂದು ತಿಂಗಳ ಅವಧಿಯೊಳಗೆ ಸರ್ಕಾರವು CrPC ಅಡಿಯಲ್ಲಿ ಸಲೇಂನನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತದೆ.
ಫೆಬ್ರವರಿ 25, 2015 ರಂದು, ವಿಶೇಷ ಟಾಡಾ ನ್ಯಾಯಾಲಯವು 1995 ರಲ್ಲಿ ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಅವರನ್ನು ತನ್ನ ಚಾಲಕ ಮೆಹಂದಿ ಹಸನ್ ಜೊತೆಗೆ ಸೇರಿ ಕೊಲೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಸಲೇಂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ನವೆಂಬರ್ 11, 2005ರಂದು ಸಲೇಂನನ್ನು ಗಡೀಪಾರು ಮಾಡಲಾಗಿತ್ತು.
Advertisement