ನಾವು ಕಾಂಗ್ರೆಸ್ ಜೊತೆಗೇ ಇದ್ದೇವೆ: ಬಿಜೆಪಿ ಸೇರ್ಪಡೆ ಸಾಧ್ಯತೆ ನಿರಾಕರಿಸಿದ ಗೋವಾ ಶಾಸಕ ಮೈಕೆಲ್ ಲೋಬೋ

ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಪ್ರತಿಕ್ರಿಯೆ ನೀಡಿದ್ದು ನಾವು ಕಾಂಗ್ರೆಸ್ ಜೊತೆಗೇ ಇದ್ದೇವೆ ಎಂದು ಹೇಳಿದ್ದು, ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಲೋಬೋ
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಲೋಬೋ

ಪಣಜಿ: ಗೋವಾದಲ್ಲಿ ಆಪರೇಷನ್ ಕಮಲದ ಸಾಧ್ಯತೆಗಳ ವರದಿ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಪ್ರತಿಕ್ರಿಯೆ ನೀಡಿದ್ದು ನಾವು ಕಾಂಗ್ರೆಸ್ ಜೊತೆಗೇ ಇದ್ದೇವೆ ಎಂದು ಹೇಳಿದ್ದು, ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
 
ವಿಪಕ್ಷ ನಾಯಕನ ಸ್ಥಾನದಿಂದ ಮೈಕಲ್ ಲೋಬೋ ಅವರನ್ನು ವಜಾಗೊಳಿಸಿದ್ದ ಕಾಂಗ್ರೆಸ್ ಪಕ್ಷ, ಲೋಬೋ ಹಾಗೂ ಮಾಜಿ ಸಿಎಂ ದಿಗಂಬರ್ ಕಾಮತ್ ಅವರು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ನಲ್ಲಿ ಬಿರುಕು ಮೂಡಿಸಲು ಪಿತೂರಿ ರೂಪಿಸಿದ್ದಾರೆ ಎಂದು ಆರೋಪಿಸಿತ್ತು.
 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಬೋ, ತಮ್ಮನ್ನು ವಜಾಗೊಳಿಸಿರುವುದಕ್ಕೆ ಕಾರಣ ತಿಳಿದಿಲ್ಲ. ದಕ್ಷಿಣ ಗೋವಾದಲ್ಲಿ ಎಲ್ಲಾ ಶಾಸಕರೂ ಒಟ್ಟಿಗೇ ಇದ್ದೆವು. ತಾವು ವಿಪಕ್ಷ ನಾಯಕನಾಗಿ ಮುಂದುವರೆಲು ಅನಾಸಕ್ತಿ ಹೊಂದಿರುವುದನ್ನು ಪಕ್ಷಕ್ಕೆ ತಿಳಿಸಿದ್ದೆ ಎಂದು ಹೇಳಿದ್ದಾರೆ. 

ಸಮಸ್ಯೆ ಏನೆಂಬುದು ನನಗೆ ತಿಳಿಯುತ್ತಿಲ್ಲ. ಎಲ್ಲಾ ಕಾಂಗ್ರೆಸ್ ಶಾಸಕರೂ ಒಟ್ಟಿಗೇ ಇದ್ದರು. ನಾವು ದಕ್ಷಿಣ ಗೋವಾಗೆ ಹೋಗಿದ್ದೆವು. ಮತ್ತೊಮ್ಮೆ ಅವರು ಮತ್ತೊಂದು ಸುದ್ದಿಗೋಷ್ಠಿ ನಡೆಸಲು ಉದ್ದೇಶಿಸಿದ್ದರು. ನಾನು ವಿಪಕ್ಷನಾಯಕನಾಗಿ ಮುಂದುವರೆಯುವುದಿಲ್ಲ ಎಂಬುದನ್ನು ಪಕ್ಷದ ನಾಯಕರಿಗೆ ತಿಳಿಸಿ ಮನವಿ ಮಾಡಿದ್ದೆ. 

ನಾವು ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದೇವೆ, ನಾವು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ. ನಾವು ಕಾಂಗ್ರೆಸ್ ಜೊತೆಗೇ ಇರುತ್ತೇವೆ. ಆದ್ದರಿಂದ ಇಷ್ಟು ಪತ್ರಿಕಾಗೋಷ್ಠಿ ನಡೆಸುವ ಪ್ರಶ್ನೆಯೇ ಬರುವುದಿಲ್ಲ. ವಿಪಕ್ಷ ನಾಯಕನಾಗಿ ಮುಂದುವರೆಯುವುದಕ್ಕೆ ನನಗೆ ಆಸಕ್ತಿ ಇಲ್ಲ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದೆ. ನನ್ನ ವಿರುದ್ಧ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಲೊಬೋ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com