ರಾಜಸ್ಥಾನ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉದಯಪುರದ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಎನ್ ಐಎ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸರ್ಕಾರಿ ವಕೀಲರು ಶನಿವಾರ ತಿಳಿಸಿದ್ದಾರೆ.
ಆರೋಪಿಗಳಾದ ರಿಯಾಜ್ ಅಟ್ಟಾರಿ, ಘೌಸ್ ಮೊಹಮ್ಮದ್ ಮತ್ತು ಫರ್ಹಾದ್ ಮೊಹಮ್ಮದ್ ಶೇಕ್ ಅವರನ್ನು ಇಂದು ಬಿಗಿ ಭದ್ರತೆ ನಡುವೆ ಉಗ್ರ ನಿಗ್ರಹ ದಳ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಗಸ್ಟ್ 1ರವರೆಗೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೋರ್ಟ್ ಆದೇಶ ಹೊರಡಿಸಿತು.
ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪರ್ ಶರ್ಮಾ ಪರ ಫೋಸ್ಟ್ ಹಿನ್ನೆಲೆಯಲ್ಲಿ ಜೂನ್ 28 ರಂದು ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಹತ್ಯೆಯಾಗಿತ್ತು.
Advertisement