ಯೋಧನ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ನೆಟ್ಟಿಗರ ಮನಸನ್ನು ಕಲುಕಿದ ದೃಶ್ಯ, ವಿಡಿಯೋ ವೈರಲ್!
ಬೆಂಗಳೂರು: ದೇಶ ಕಾಯುವ ಯೋಧರು ದೇವರಿಗೆ ಸಮ. ಹಗಲು ಇರುಳು ಎನ್ನದೇ ದೇಶಕ್ಕಾಗಿ, ದೇಶದ ಜನರಿಗಾಗಿ ದುಡಿಯುವ ಇವರು ನಮ್ಮ ದೇಶದ ರಕ್ಷಕರು. ದೇಶ ಸೇವೆಯೇ ಈಶ ಸೇವೆ ಎಂದು ದೇಶದ ಹಿತಕ್ಕಾಗಿ ದೇಹ ಸವೆಸುವ ಇವರು ಜೀವ, ಬದುಕಿನ ಹಂಗು ತೊರೆದು ದೇಶ ಸೇವೆಯಲ್ಲಿ ನಿರತರಾಗಿರುತ್ತಾರೆ.
ದೇಶ ಸೇವೆಯೇ ಉಸಿರೆಂದು ಬದುಕುತ್ತಿರುವ ಯೋಧರನ್ನು ಕಂಡಾಗ ನಮ್ಮಲ್ಲಿ ಒಂದು ಗೌರವ ಹುಟ್ಟುತ್ತದೆ. ಕೆಲವರು ಅವರನ್ನು ಕಂಡೊಡನೆ ಕೈ ಕುಲುಕುವುದು, ಅಭಿನಂದಿಸುವುದು ಮಾಡುತ್ತೇವೆ. ಆದರೆ ಇಲ್ಲೊಂದು ಮಗು ನಿಂತಿದ್ದ ಯೋಧರ ಬಳಿ ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದೆ.
ಕಪ್ಪು ಬಣ್ಣದ ಫ್ರಾಕ್ ತೊಟ್ಟ ಮುದ್ದಾದ ಮಗು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡುತ್ತಾ ಸೈನಿಕರ ಬಳಿಗೆ ಹೋಗಿ ನಿಲ್ಲುತ್ತದೆ. ಆಗ ಅಲ್ಲಿಯೇ ತಮ್ಮ ಇನ್ನೊಬ್ಬರ ಸೈನಿಕರ ಜೊತೆ ಮಾತನಾಡುತ್ತಾ ನಿಂತಿದ್ದ ಸೈನಿಕ ಮಗುವನ್ನು ಕಂಡಾಕ್ಷಣ ಗಲ್ಲ ಹಿಡಿದು ಮಾತನಾಡಿಸುತ್ತಾರೆ. ಸೈನಿಕರ ಮುಖವನ್ನೇ ನೋಡುತ್ತಿದ್ದ ಮಗು ಸೈನಿಕರ ಕಾಲಿಗೆ ನಮಸ್ಕರಿಸುತ್ತದೆ. ಈ ವಿಡಿಯೋ ಸಾಮಾಜಿಕ ವೇದಿಕೆ ಕೂ ನಲ್ಲಿ ವೈರಲ್ ಆಗಿದೆ.
ಹರ್ಷವರ್ಧನ್ ಮುಪ್ಪವರಪು ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಇದು ಸಂಸ್ಕಾರದ ಆತ್ಮವನ್ನು ಕಲುಕುವ ಕ್ರಿಯೆ ಎಂದು ವ್ಯಾಖ್ಯಾನಿಸಿದ್ದಾರೆ.
ಇವರ ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದು, ಕಂದನಿಗೆ ಸೈನಿಕರು ದೇವರಂತೆ ಕಂಡಾಗ, ಸೈನಿಕರೂ ಆ ಕಂದನನ್ನು ದೇವರಂತೆ ಕಂಡಿರುತ್ತಾರೆ! ಮುಗ್ಧ ಪ್ರೀತಿಯ ದೇವರು ಮತ್ತು ರಕ್ಷಣೆ ನೀಡುವ ದೇವರು ಭೇಟಿಯಾದ ಕ್ಷಣ ಎಂದು ಸುದರ್ಶನ್ ಹಾರ್ನಳ್ಳಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಪುನೀತ್ ಎಂಬುವವರು ಒಂದು ಕ್ಯೂಟ್ನೆಸ್ ಮತ್ತು ಇನ್ನೊಂದು ಶಕ್ತಿ ಎರಡೂ ನಮ್ಮ ರಾಷ್ಟ್ರದ ಶಕ್ತಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ