ತಾಂತ್ರಿಕ ದೋಷಗಳು: ವಿಮಾನ ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಎಂಜಿನಿಯರಿಂಗ್ ಸಿಬ್ಬಂದಿ ಪತ್ತೆ ಮಾಡಿದ ಡಿಜಿಸಿಎ
ನವದೆಹಲಿ: ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಲ್ಲಿನ ತಾಂತ್ರಿಕ ದೋಷ ಪ್ರಕರಣಗಳು ವರದಿಯಾದ ಬೆನ್ನಲ್ಲೇ ವಾಯುಯಾನ ನಿಯಂತ್ರಕ ಡಿಜಿಸಿಎ ಸ್ಥಳ ಪರಿಶೀಲನೆ ನಡೆಸಿದ್ದು ವಿಮಾನಗಳನ್ನು ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಇಂಜಿನಿಯರಿಂಗ್ ಸಿಬ್ಬಂದಿಗಳನ್ನು ಪತ್ತೆ ಮಾಡಿದೆ.
ಪ್ರತಿ ನಿರ್ಗಮನಕ್ಕೂ ಮೊದಲು, ವಿಮಾನ ನಿರ್ವಹಣಾ ಎಂಜಿನಿಯರ್ (AME)ಗಳ ಮೂಲಕ ವಿಮಾನವನ್ನು ಪರಿಶೀಲಿಸಿ, ಪ್ರಮಾಣೀಕರಿಸಲಾಗುತ್ತದೆ. ಇದೀಗ ಡಿಜಿಸಿಎ AME ಸಿಬ್ಬಂದಿಯ ನಿಯೋಜನೆಯ ಕುರಿತು ವಿಮಾನಯಾನ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಜೊತೆಗೆ ಜುಲೈ 28 ರೊಳಗೆ ಅನುಸರಿಸುವಂತೆ ನಿರ್ದೇಶಿಸಿದೆ.
ಇದರೊಂದಿಗೆ, ಯಾವುದೇ ಏರ್‌ಲೈನ್ಸ್‌ನ ವಿಮಾನಗಳು ಅದರ ಸುರಕ್ಷತೆಯ ಬಗ್ಗೆ ಆ ಸಂಸ್ಥೆಯ ಪರವಾನಗಿ ಪಡೆದ ಸಿಬ್ಬಂದಿ ಅನುಮೋದಿಸಿದರೆ ಮಾತ್ರ ಬೇಸ್ ಅಥವಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಲು ಅನುಮತಿಸಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.
ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದ ಉದ್ಯೋಗಿಗಳನ್ನು ಪರಿಶೀಲಿಸಿದ ನಂತರವೇ ಸಂಸ್ಥೆಯಲ್ಲಿ ಇರಿಸಬೇಕು ಎಂದು ಡಿಜಿಸಿಎ ಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚು ಜಾಗರೂಕರಾಗಿರಲು ನಾವು ನಿರ್ವಾಹಕರಿಗೆ ಸೂಚಿಸುತ್ತೇವೆ. ನಮ್ಮ ಕಡೆಯಿಂದ ನಾವು ನಮ್ಮ ಮೇಲುಸ್ತುವಾರಿಯನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದರು.
ಕಳೆದ ಒಂದು ತಿಂಗಳಲ್ಲಿ ಸ್ಪೈಸ್ ಜೆಟ್, ಇಂಡಿಗೋ ಮುಂತಾದ ವಿಮಾನಯಾನ ಸಂಸ್ಥೆಗಳ ವಿಮಾನಗಳು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ