ರಾಷ್ಟ್ರಪತಿ ಚುನಾವಣೆ: ಪುದುಚೇರಿ ಶಾಸಕರು, ಏಕೈಕ ಸಂಸದ 12 ಗಂಟೆಯ ನಂತರವೇ ಮತ ಚಲಾಯಿಸಿದ್ದು ಏಕೆ ಗೊತ್ತಾ?

ರಾಷ್ಟ್ರಪತಿ ಚುನಾವಣೆಯಲ್ಲಿ ಪುದುಚೇರಿ ವಿಧಾನಸಭೆಯ ಎಲ್ಲಾ 30 ಶಾಸಕರು ಮತ್ತು ಏಕೈಕ ಲೋಕಸಭಾ ಸದಸ್ಯ ವಿ.ವೈತಿಲಿಂಗಂ ಅವರು ಸೋಮವಾರ ಮಧ್ಯಾಹ್ನ 12 ಗಂಟೆಯ ನಂತರ ಮತ ಚಲಾಯಿಸಿದರು.
ರಾಷ್ಟ್ರಪತಿ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು, ಯಶವಂತ ಸಿನ್ಹಾ
ರಾಷ್ಟ್ರಪತಿ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು, ಯಶವಂತ ಸಿನ್ಹಾ
Updated on

ಪುದುಚೇರಿ: ರಾಷ್ಟ್ರಪತಿ ಚುನಾವಣೆಯಲ್ಲಿ ಪುದುಚೇರಿ ವಿಧಾನಸಭೆಯ ಎಲ್ಲಾ 30 ಶಾಸಕರು ಮತ್ತು ಏಕೈಕ ಲೋಕಸಭಾ ಸದಸ್ಯ ವಿ.ವೈತಿಲಿಂಗಂ ಅವರು ಸೋಮವಾರ ಮಧ್ಯಾಹ್ನ 12 ಗಂಟೆಯ ನಂತರ ಮತ ಚಲಾಯಿಸಿದರು. ಈ ಮೂಲಕ 'ಯಮಗಂಡ'ದ ಅಶುಭ ಅವಧಿಯನ್ನು ತಪ್ಪಿಸಿದರು.

ವಿಧಾನಸೌಧದ ಆವರಣದಲ್ಲಿರುವ ಮತಗಟ್ಟೆಗೆ ಪ್ರವೇಶಿಸುವ ಮೊದಲು ಆಡಳಿತ ಪಕ್ಷ, ವಿರೋಧ ಪಕ್ಷದ ಶಾಸಕರು ಮತ್ತು ಆರು ಪಕ್ಷೇತರ ಶಾಸಕರು ರಾತ್ರಿ 10.30 ರಿಂದ ಬೆಳಗ್ಗೆ 12 ಗಂಟೆಯವರೆಗೆ ‘ಯಮಗಂಡ’ ಅಶುಭ ಕಾಲ ಎಂದು ಮತದಾನದಿಂದ ದೂರ ಉಳಿದರು.

ಇದನ್ನು ಓದಿ: ರಾಷ್ಟ್ರಪತಿ ಚುನಾವಣೆ; ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
 
ಲೋಕಸಭೆ ಸದಸ್ಯ ವಿ ವೈತಿಲಿಂಗಂ(ಕಾಂಗ್ರೆಸ್) ಮತ್ತು ವಿರೋಧ ಪಕ್ಷದ ನಾಯಕ ಆರ್ ಶಿವ(ಡಿಎಂಕೆ) ನೇತೃತ್ವದ ಪ್ರತಿಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಬೇಗನೆ ವಿಧಾನ ಸಭೆ ಸಂಕೀರ್ಣಕ್ಕೆ ಆಗಮಿಸಿದರೂ ಮಧ್ಯಾಹ್ನ 12 ಗಂಟೆಯ ನಂತರ ಕೆಲವೇ ನಿಮಿಷಗಳಲ್ಲಿ ಮತ ಚಲಾಯಿಸಿದರು.

"ನಾವು ನಮ್ಮ ಏಕೀಕೃತ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಅವರಿಗೆ ಮತ ಹಾಕುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಎಲ್ಲಾ ಶಾಸಕರು ಮತ್ತು ಸಂಸದರು ಮತ ಚಲಾಯಿಸಿದ ನಂತರ ವಿರೋಧ ಪಕ್ಷದ ಪರವಾಗಿ ವೈತಿಲಿಂಗಂ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com