ಎದೆಗೆ ತಲೆಗೂದಲು ಮುಚ್ಚಿಕೊಂಡು ಪರೀಕ್ಷೆ ಬರೆದದ್ದು ಅತ್ಯಂತ ಕೆಟ್ಟ ಅನುಭವ: ಅಳಲು ತೊಡಿಕೊಂಡ ವಿದ್ಯಾರ್ಥಿನಿ

ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಯುವತಿಯರ ಒಳ ಉಡುಪು ತೆಗೆಸಿದ ವಿಚಾರ ವಿವಾದಕ್ಕೀಡಾಗಿದ್ದು, ಯುವತಿಯೊಬ್ಬಳು ತನಗಾದ ಅವಮಾನ ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಯುವತಿಯರ ಒಳ ಉಡುಪು ತೆಗೆಸಿದ ವಿಚಾರ ವಿವಾದಕ್ಕೀಡಾಗಿದ್ದು, ಯುವತಿಯೊಬ್ಬಳು ತನಗಾದ ಅವಮಾನ ಹೇಳಿಕೊಂಡಿದ್ದಾರೆ.

ಒಳ ಉಡುಪು ತೆಗೆಸಿದ ಕಾರಣ ತನ್ನ ತಲೆಗೂದಲನ್ನು ಎದೆಗೆ ಮುಚ್ಚಿಕೊಂಡು ಪರೀಕ್ಷೆ ಎದುರಿಸಬೇಕಾಯಿತು. ಇದು ಅತ್ಯಂತ ಕೆಟ್ಟ ಅನುಭವ ಎಂದು ಯುವತಿಯೊಬ್ಬಳು ಮಂಗಳವಾರ ತನಗಾದ ಅವಮಾನವನ್ನು ವಿವರಿಸಿದ್ದಾಳೆ.

ಕೊಠಡಿ ಮೇಲ್ವಿಚಾರಕರು ನನಗೆ ಕರೆ ಮಾಡಿದರು ಮತ್ತು ಸ್ಕ್ಯಾನಿಂಗ್ ಇದೆ ಎಂದು ಹೇಳಿದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದ್ದೇವು. ಆದರೆ ಅವರು ನಮ್ಮನ್ನು ಎರಡು ಸರತಿಯಲ್ಲಿ ನಿಲ್ಲುವಂತೆ ಹೇಳಿದರು. ಒಂದು ಲೋಹದ ಕೊಕ್ಕೆಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ ಮತ್ತು ಇನ್ನೊಂದು ಸಾಲು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿರುವ ಯುವತಿಯರ ಸಾಲು.

ಅವರು ನನ್ನನ್ನು ಕೇಳಿದರು, ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ನಾನು ಹೌದು ಎಂದು ಹೇಳಿದೆ, ಆದ್ದರಿಂದ ಆ ಸಾಲಿಗೆ ಸೇರಲು ಹೇಳಿದರು. ಏನಾಗುತ್ತಿದೆ ಮತ್ತು ಏಕೆ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದು ಹುಡುಗಿ ಹೇಳಿದರು.

ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ಹೇಳಿದರು. ಎಲ್ಲಾ ಬ್ರಾಗಳು ಒಟ್ಟಿಗೆ ಜೋಡಿಸಲ್ಪಟ್ಟಿದ್ದವು. ನಾವು ಹಿಂತಿರುಗಿದಾಗ ನಮ್ಮ ಒಳ ಉಡುಪು ನಮಗೆ ಸಿಗುತ್ತದೆಯೇ ಎಂದು ನಮಗೆ ಗ್ಯಾರಂಟಿ ಇಲ್ಲ. ನಾವು ಹಿಂತಿರುಗಿದಾಗ ಅಲ್ಲಿ ಕಿಕ್ಕಿರಿದಿತ್ತು. ಒಳಉಡುಪು ತೆಗೆದುಕೊಳ್ಳುವುದು ಹರಸಾಹಸವಾಗಿತ್ತು. ಆದರೆ ನನಗೆ ಸಿಕ್ಕಿತು ಎಂದು ಅವರು ಹೇಳಿದರು.

ಕೆಲವು ಹುಡುಗಿಯರು ನಾಚಿಕೆಯಿಂದ ಅಳುತ್ತಿದ್ದರು. ಮಹಿಳಾ ಭದ್ರತಾ ಉದ್ಯೋಗಿಯೊಬ್ಬರು, ನೀವು ಯಾಕೆ ಅಳುತ್ತೀರಿ?ಅವರು ನಿಮ್ಮ ಬ್ರಾವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಬಿಡಿ, ಅವುಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಅದನ್ನು ಕೇಳಿ ನಮಗೆ ತುಂಬಾ ಮುಜುಗರವಾಯಿತು. ಆದರೆ ಎಲ್ಲರೂ ಬದಲಾಯಿಸಲು ಕಾಯುತ್ತಿದ್ದರು. ಕತ್ತಲೆಯಾಗಿತ್ತು ಮತ್ತು ಬದಲಾಯಿಸಲು ಸ್ಥಳವಿಲ್ಲ. ಇದು ಭಯಾನಕ ಅನುಭವವಾಗಿದೆ. ನಾವು ಪರೀಕ್ಷೆ ಬರೆಯುವಾಗ ಶಾಲು ಬಳಸಲು ಅನುಮತಿ ಇಲ್ಲದ ಕಾರಣ ತಲೆಗೂದಲು ಹಾಕಿಕೊಂಡೆವು ಎಂದು ಹೇಳಿದಳು.

17 ವರ್ಷದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಆಘಾತಕಾರಿ ಘಟನೆ ಹೊರಬಿದ್ದಿದೆ. ಪರೀಕ್ಷೆ ಬರೆಯುವ ಮುನ್ನ ಶೇ.90ರಷ್ಟು ಹೆಣ್ಣುಮಕ್ಕಳು ತಮ್ಮ ಒಳಉಡುಪು ತೆಗೆಯಬೇಕಿತ್ತು ಎಂದು ಗದ್ಗದಿತರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com