ಒಂದೆಡೆ ಭಾರತ-ಚೀನಾ ಗಡಿ ಸಂಘರ್ಷ, ಮತ್ತೊಂದೆಡೆ ಭಾರತೀಯ ಸೇನೆಗೆ ಅಧಿಕಾರಿಗಳು, ಸಿಬ್ಬಂದಿ ಕೊರತೆಯ ತಲೆನೋವು!

ಭಾರತ-ಚೀನಾ ಮಧ್ಯೆ ಗಡಿವಿವಾದ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಪೂರ್ವ ಲಡಾಕ್ ನಲ್ಲಿ ಸಿಬ್ಬಂದಿ, ಸೇನಾಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ.
ಒಂದೆಡೆ ಭಾರತ-ಚೀನಾ ಗಡಿ ಸಂಘರ್ಷ, ಮತ್ತೊಂದೆಡೆ ಭಾರತೀಯ ಸೇನೆಗೆ ಅಧಿಕಾರಿಗಳು, ಸಿಬ್ಬಂದಿ ಕೊರತೆಯ ತಲೆನೋವು!

ನವದೆಹಲಿ: ಭಾರತ-ಚೀನಾ ಮಧ್ಯೆ ಗಡಿವಿವಾದ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಪೂರ್ವ ಲಡಾಕ್ ನಲ್ಲಿ ಸಿಬ್ಬಂದಿ, ಸೇನಾಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ಸ್ (JCO) ಮತ್ತು ಇತರ ಶ್ರೇಣಿಗಳ (ORS) ಸಿಬ್ಬಂದಿಗಳ ಒಟ್ಟು ಕೊರತೆಯು ಒಂದು ಲಕ್ಷಕ್ಕಿಂತ ಹೆಚ್ಚಿದೆ. ಈಗ ಅಧಿಕಾರಿಗಳ ಸಂಖ್ಯೆ ಮಂಜೂರಾದ ಹುದ್ದೆಗಳ ಶೇಕಡಾ 10 ಕ್ಕಿಂತ ಹೆಚ್ಚಿದೆ.

JCO ಗಳು ಮತ್ತು ORಗಳಲ್ಲಿ ಭಾರತೀಯ ಸೇನೆಯಲ್ಲಿನ ಕೊರತೆಯು 1,08685 ಆಗಿದ್ದರೆ ಭಾರತೀಯ ವಾಯುಪಡೆಯಲ್ಲಿ ಇದು 5,217 ಮತ್ತು ಭಾರತೀಯ ನೌಕಾಪಡೆಯಲ್ಲಿ 12,151 ಆಗಿದೆ. ಭಾರತೀಯ ಸೇನೆಯಲ್ಲಿ 12,41,768 ಜೆಸಿಒಗಳು ಮತ್ತು ಒಆರ್‌ಗಳು, ವಾಯುಪಡೆಯಲ್ಲಿ 1, 56,362 ಮತ್ತು ನೌಕಾಪಡೆಯಲ್ಲಿ 75,866 ಸೇವೆಗಳಿಗೆ ಮಂಜೂರಾದ ಸಾಮರ್ಥ್ಯವಿದೆ. ಸಶಸ್ತ್ರ ಪಡೆಗಳಲ್ಲಿನ ಸಿಬ್ಬಂದಿ ಕೊರತೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ರಕ್ಷಣಾ ಇಲಾಖೆ ರಾಜ್ಯ ಸಚಿವ ಅಜಯ್ ಭಟ್ ಅವರು ಲೋಕಸಭೆಯಲ್ಲಿ ನಿನ್ನೆ ತಿಳಿಸಿದರು.

ಅಧಿಕಾರಿಗಳ ವಿಚಾರಕ್ಕೆ ಬರುವುದಾದರೆ, ಭಾರತೀಯ ಸೇನೆಯು 7,308 ಹುದ್ದೆಗಳನ್ನು ಹೊಂದಿದೆ. ಅವುಗಳಲ್ಲಿ 1,446 ಮತ್ತು 572 ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಹುದ್ದೆಗಳಾಗಿವೆ. ಮಂಜೂರಾದ ಅಧಿಕಾರಿಗಳ ಸಂಖ್ಯೆ ಭಾರತೀಯ ಸೇನೆಗೆ 56, 972, ನೌಕಾಪಡೆಗೆ 11,821 ಮತ್ತು ಭಾರತೀಯ ವಾಯುಪಡೆಗೆ 12,745 ಆಗಿದೆ. 

ಖಾಲಿ ಇರುವ ಹುದ್ದೆಗಳಲ್ಲಿ ಅಧಿಕಾರಿಗಳು, ಜೆಸಿಒಗಳು ಮತ್ತು ಇತರೆ ಹುದ್ದೆಗಳಲ್ಲಿ ನೇಮಕಗೊಂಡ ಸಿಬ್ಬಂದಿಗೆ ಕೆಲಸ ಹಂಚಿಹೋಗಿ ಸಾಕಷ್ಟು ಇರುವುದರಿಂದ ಅದು ಒತ್ತಡಕ್ಕೆ ಕಾರಣವಾಗುತ್ತಿದೆ. 

ಖಾಲಿ ಹುದ್ದೆಗಳು ಲೆಫ್ಟಿನೆಂಟ್, ಕ್ಯಾಪ್ಟನ್ ಮತ್ತು ಮೇಜರ್ ಮತ್ತು ಇತರ ಎರಡು ಸೇವೆಗಳಲ್ಲಿ ಸಮಾನವಾದ ಕೆಳ ಶ್ರೇಣಿಯ ಮಟ್ಟದಲ್ಲಿ ಮುಂದುವರಿಯುತ್ತವೆ. ಇವುಗಳು ಕಾರ್ಯಾಚರಣೆಯಲ್ಲಿ ಹೆಚ್ಚು ಬದ್ಧವಾಗಿರುವ ಸ್ಥಾನಗಳಾಗಿವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಜಯ್ ಭಟ್ ತಿಳಿಸಿದ್ದಾರೆ.

ಕೊರತೆ ನೀಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ವೃತ್ತಿಪರ ಮೇಳ, ಪ್ರದರ್ಶನಗಳು ಮತ್ತು ಸಾರ್ವಜನಿಕ ಅಭಿಯಾನಗಳಲ್ಲಿ ಹೆಚ್ಚೆಚ್ಚು ಯುವಕರು ಭಾಗವಹಿಸಿ ಅವರಲ್ಲಿ ಜಾಗೃತಿ ಮೂಡಿಸಲು ನೋಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com