ಅಜಿತ್ ದೋವಲ್ ಸಮ್ಮುಖದಲ್ಲಿ “ಸರ್ ತನ್ ಸೆ ಜುದಾ” ಇಸ್ಲಾಂ ವಿರೋಧಿ ಎಂದ ಮುಸ್ಲಿಂ ಧರ್ಮಗುರು

ದೆಹಲಿಯಲ್ಲಿ ನಡೆದ ಅಖಿಲ ಭಾರತ ಸೂಫಿ ಸಜ್ಜದನ್ಶಿನ್ ಕೌನ್ಸಿಲ್‌ನ ಸರ್ವಧರ್ಮ ಸಮ್ಮೇಳನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್ ದೋವಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದೋವಲ್, ಕೆಲವು ಶಕ್ತಿಗಳು...
ಅಜಿತ್ ದೋವಲ್
ಅಜಿತ್ ದೋವಲ್
Updated on

ನವದೆಹಲಿ: ದೆಹಲಿಯಲ್ಲಿ ನಡೆದ ಅಖಿಲ ಭಾರತ ಸೂಫಿ ಸಜ್ಜದನ್ಶಿನ್ ಕೌನ್ಸಿಲ್‌ನ ಸರ್ವಧರ್ಮ ಸಮ್ಮೇಳನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್ ದೋವಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದೋವಲ್, ಕೆಲವು ಶಕ್ತಿಗಳು ಅಹಿತಕರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಅದು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ್ದರು.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಕೌನ್ಸಿಲ್ ಅಧ್ಯಕ್ಷ ಹಜರತ್ ಸೈಯದ್ ನಾಸಿರುದ್ದೀನ್ ಚಿಶ್ತಿ, “ಸರ್ ತನ್ ಸೆ ಜುದಾ ನಮ್ಮ ಘೋಷಣೆಯಲ್ಲ. ಇದು ಇಸ್ಲಾಂ ವಿರೋಧಿ ಘೋಷಣೆಯಾಗಿದೆ.” ಆ್ಯಂಟಿ ರಾಡಿಕಲ್ ಫ್ರಂಟ್ ಸ್ಕ್ವಾಡ್ ಅನ್ನು ರಚಿಸಬೇಕು, ಇದರಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಬೇಕು ಎಂದು ಹೇಳಿದರು. ಪಿಎಫ್‌ಐ ವಿರುದ್ಧ ಸಾಕ್ಷ್ಯಾಧಾರಗಳಿದ್ದರೆ ಅವರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಬೇಕು ಎಂದು ಹೇಳಿದರು.

ಪ್ರಪಂಚದಲ್ಲಿ ವಿಚಿತ್ರ ಸಂಘರ್ಷ ಏರ್ಪಟ್ಟಿದೆ, ಆದರೆ ನಮ್ಮ ದೇಶದಲ್ಲಿ ನಾವು ನಮ್ಮ ಮನೆಗಳನ್ನು ಸುರಕ್ಷಿತವಾಗಿ ಇರಿಸಿದ್ದೇವೆ. ಧರ್ಮ ಅಥವಾ ಇನ್ಯಾವುದೇ ಸಿದ್ಧಾಂತದ ಹೆಸರಿನಲ್ಲಿ ವಿವಾದ ಸೃಷ್ಟಿಸುವ ಕೆಲವರಿಂದಾಗಿ ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಯಾವುದೇ ಘಟನೆ ನಡೆದಾಗ ಅದನ್ನು ಖಂಡಿಸುತ್ತೇವೆ. ಮೂಲಭೂತವಾದಿ ಸಂಘಟನೆಗಳಿಗೆ ಕಡಿವಾಣ ಹಾಕುವ ಮತ್ತು ನಿಷೇಧಿಸುವ ಅಗತ್ಯವಿದೆ. ಯಾವುದೇ ಸಂಘಟನೆಯಾಗಿರಲಿ ಅವರ ವಿರುದ್ಧ ಸಾಕ್ಷ್ಯವಿದ್ದರೆ ಅವುಗಳನ್ನು ನಿಷೇಧಿಸಬೇಕು ಎಂದು ಚಿಶ್ತಿ ತಿಳಿಸಿದರು.

ಪಿಎಫ್‌ಐ ನಿಷೇಧಕ್ಕೆ ಒಪ್ಪಿಗೆ
ಸಮಾವೇಶದಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ಮುಸ್ಲಿಂ ಧಾರ್ಮಿಕ ಮುಖಂಡರು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ನಮ್ಮ ನಾಗರಿಕರಲ್ಲಿ ವಿವಾದ ಸೃಷ್ಟಿಸುತ್ತಿರುವ ಪಿಎಫ್‌ಐನಂತಹ ಸಂಘಟನೆಗಳನ್ನು ನಿಷೇಧಿಸಬೇಕು. ಅವರ ವಿರುದ್ಧ ದೇಶದ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಯಾವುದೇ ಚರ್ಚೆ ಅಥವಾ ಚರ್ಚೆಯ ಸಂದರ್ಭದಲ್ಲಿ ದೇವತೆಗಳು ಅಥವಾ ಪ್ರವಾದಿಗಳನ್ನು ಗುರಿಯಾಗಿಸುವುದನ್ನು ಖಂಡಿಸಬೇಕು. ಅಂತಹ ವಿಷಯಗಳನ್ನು ಕಾನೂನಿನ ಅನುಸಾರವಾಗಿ ಕ್ರಮಕೈಗೊಳ್ಳಬೇಕು ಎಂದು ಸಮ್ಮೇಳನವು ಸರ್ವಾನುಮತದಿಂದ ನಿರ್ಣಯಿಸಿತು.

ಅಲ್ಪಸಂಖ್ಯಾತರು ಹೆಮ್ಮೆಪಡಬೇಕು
ಇದೇ ಸಮಯದಲ್ಲಿ ಅಜಿತ್ ದೋವಲ್, ಅಲ್ಪಸಂಖ್ಯಾತರು ತಾವು ಬಹಳ ಸಣ್ಣ ಧ್ವನಿ ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ನೀವು ಅತ್ಯಂತ ಸಮರ್ಥ ವ್ಯಕ್ತಿಗಳು. ಧ್ವನಿ ಎತ್ತಬೇಕು. ಪ್ರತಿಯೊಬ್ಬ ಮಗು-ವಯಸ್ಕರು ಈ ದೇಶದ ಬಗ್ಗೆ ಹೆಮ್ಮೆ ಪಡಬೇಕು. ಈ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಪ್ರತಿಯೊಂದು ಧರ್ಮ, ಪ್ರತಿಯೊಂದು ಭಾಗದ ಕೊಡುಗೆ ಇದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com