ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸರ್ಕಾರಿ ನೌಕರರು ಗೂಗಲ್ ಡ್ರೈವ್, ವಿಪಿಎನ್ ಬಳಕೆ ನಿಷೇಧಿಸಿದ ಕೇಂದ್ರ: ಏನಿದು ಹೊಸ ರೂಲ್ಸ್?

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್) ಕುರಿತ ಕೇಂದ್ರ ಸರ್ಕಾರದ ಹೊಸ ಕಾನೂನು ಜೂನ್ ಕೊನೆಯ ವಾರದಿಂದ ಜಾರಿಗೆ ಬರಲಿದೆ. ಈ ಹೊಸ ಕಾನೂನನ್ನು ವಿರೋಧಿಸಿ ನಾರ್ಡ್ ವಿಪಿಎನ್ (NordVPN)ನಂತಹ ಅನೇಕ ದೊಡ್ಡ...
Published on

ನವದೆಹಲಿ: ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್) ಕುರಿತ ಕೇಂದ್ರ ಸರ್ಕಾರದ ಹೊಸ ಕಾನೂನು ಜೂನ್ ಕೊನೆಯ ವಾರದಿಂದ ಜಾರಿಗೆ ಬರಲಿದೆ. ಈ ಹೊಸ ಕಾನೂನನ್ನು ವಿರೋಧಿಸಿ ನಾರ್ಡ್ ವಿಪಿಎನ್ (NordVPN)ನಂತಹ ಅನೇಕ ದೊಡ್ಡ ಕಂಪನಿಗಳು ಭಾರತವನ್ನು ತೊರೆಯುವುದಾಗಿ ಘೋಷಿಸಿವೆ. ಈ ಮಧ್ಯೆ, ಸರ್ಕಾರಿ ನೌಕರರು ಗೂಗಲ್ ಡ್ರೈವ್(Google Drive) ಮತ್ತು ಡ್ರಾಪ್ ಬಾಕ್ಸ್ (Dropbox) ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ವಿಪಿಎನ್ ಬಳಸುವುದನ್ನು ಸಹ ನಿಷೇಧಿಸಲಾಗಿದೆ.

NordVPN, ExpressVPN, Tor ಮತ್ತು ಪ್ರಾಕ್ಸಿ VPN ಗಳನ್ನು ಸರ್ಕಾರದಿಂದ 10 ಪುಟಗಳ ವರದಿಯಲ್ಲಿ ನಿಷೇಧಿಸಲಾಗಿದೆ. ಇದರ ಹೊರತಾಗಿ, TeamViewer, AnyDesk ಮತ್ತು Ammyy ಅಡ್ಮಿನ್‌ನಂತಹ ರಿಮೋಟ್ ಕಂಟ್ರೋಲ್ ಅಪ್ಲಿಕೇಶನ್‌ಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ.

ಸರ್ಕಾರಿ ನೌಕರರು ಯಾವುದೇ ಬಾಹ್ಯ ಇ-ಮೇಲ್ ಸೇವೆಯನ್ನು ಬಳಸದಂತೆ ಮತ್ತು ಗಂಭೀರ ಸಮಸ್ಯೆಗಳಿಗೆ ಮೂರನೇ ವ್ಯಕ್ತಿಯ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ. ಕ್ಲೌಡ್ ಸೇವೆಗಾಗಿ ಯಾವುದೇ ಬಾಹ್ಯ ವೆಬ್‌ಸೈಟ್‌ನ ಬಳಕೆಯನ್ನು ಸಹ ನಿಷೇಧಿಸಲಾಗಿದೆ.

ಎಲ್ಲಾ ಸರ್ಕಾರಿ ಕಚೇರಿಗಳು ಎಲ್ಲಾ ಸಿಸ್ಟಮ್‌ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಲು ಆದೇಶಿಸಲಾಗಿದೆ. ಇದಲ್ಲದೇ ಎಲ್ಲಾ ಕಂಪ್ಯೂಟರ್‌ಗಳ ಫರ್ಮ್‌ವೇರ್ ಅನ್ನು ನವೀಕರಿಸಲು ಸಹ ಆದೇಶಿಸಲಾಗಿದೆ. ಕಾಯಂ, ಹಂಗಾಮಿ, ಗುತ್ತಿಗೆ ಇತ್ಯಾದಿ ಎಲ್ಲ ಸರ್ಕಾರಿ ನೌಕರರಿಗೆ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಈ ಹೊಸ ನೀತಿಯಿಂದಾಗಿ ವಿಪಿಎನ್ ಗೆ ಸಂಬಂಧಿಸಿದ ಹಲವಾರು ಖಾಸಗಿ ಸೇವಾ ಸಂಸ್ಥೆಗಳು ಭಾರತದಿಂದ ನೆಟ್ ವರ್ಕ್ ತೆಗೆದು ಹಾಕಲು ನಿರ್ಧರಿಸಿವೆ.

ವಿಪಿಎನ್ ಬಗ್ಗೆ ಸರ್ಕಾರ ಏನು ಹೇಳಿದೆ?
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಏಜೆನ್ಸಿಯಾದ ಸಿಇಆರ್‌ಟಿ ಕಳೆದ ವಾರ ಆದೇಶದಲ್ಲಿ ವಿಪಿಎನ್ ಸೇವಾ ಪೂರೈಕೆದಾರರು ತಮ್ಮ ಬಳಕೆದಾರರ ಹೆಸರುಗಳು, ಇಮೇಲ್ ಐಡಿಗಳು ಮತ್ತು ಐಪಿ ವಿಳಾಸಗಳನ್ನು ಒಳಗೊಂಡಂತೆ ಐದು ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಡೇಟಾವನ್ನು ಸಂಗ್ರಹಿಸಬೇಕಾಗುತ್ತದೆ ಎಂದು ಹೇಳಿದೆ. ವಿಪಿಎನ್ ಕಂಪನಿಯ ನೋಂದಣಿಯನ್ನು ಯಾವುದೋ ಕಾರಣಕ್ಕೆ ರದ್ದುಪಡಿಸಿದರೆ, ನಂತರವೂ ಡೇಟಾ ಕೇಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರಳವಾಗಿ ಹೇಳುವುದಾದರೆ, VPN ಕಂಪನಿಯನ್ನು ಮುಚ್ಚಿದ ನಂತರ ಅಥವಾ ನಿಷೇಧಿಸಿದ ನಂತರವೂ ಅದು ಸರ್ಕಾರಕ್ಕೆ ಡೇಟಾವನ್ನು ನೀಡಬೇಕಾಗುತ್ತದೆ. ಎಲ್ಲಾ ಸೇವಾ ಪೂರೈಕೆದಾರರು ತಮ್ಮ ಸಿಸ್ಟಂನಲ್ಲಿ ಕಡ್ಡಾಯವಾಗಿ ಲಾಗಿನ್ ಮಾಡುವ ಸೌಲಭ್ಯವನ್ನು ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಡಿಜಿ ಲಾಕರ್ ಎಂಬ ಸರ್ಕಾರದ ತನ್ನದೆಯಾದ ಕ್ಲೌಡ್ ಸ್ಟೋರೇಜ್ ವ್ಯವಸ್ಥೆ ಇದ್ದು, ಇದು ಸಂಪೂರ್ಣ ಉಚಿತ ಸೇವೆ ನೀಡುತ್ತಿದೆ. ಇದಕ್ಕೆ ಯಾವುದೇ ರೀತಿಯ ಹಣ ಪಾವತಿ ಮಾಡುವಂತಿಲ್ಲ. ಇದರಲ್ಲಿ ಕಡತಗಳನ್ನು ಶೇಖರಿಸಿ ಇಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com