ಪ್ರಗ್ಯಾ ಸಿಂಗ್ ಠಾಕೂರ್
ದೇಶ
ಪ್ರಗ್ಯಾ ಠಾಕೂರ್ ಗೆ ದಾವೂದ್ ಗ್ಯಾಂಗ್ ನಿಂದ ಬೆದರಿಕೆ
ತಮಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಗ್ಯಾಂಗ್ ನಿಂದ ಬೆದರಿಕೆ ಬಂದಿದೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ದೂರು ದಾಖಲಿಸಿದ್ದಾರೆ.
ತಮಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಗ್ಯಾಂಗ್ ನಿಂದ ಬೆದರಿಕೆ ಬಂದಿದೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ದೂರು ದಾಖಲಿಸಿದ್ದಾರೆ.
ತಮಗೆ ಕರೆ ಮಾಡಿದ್ದ ವ್ಯಕ್ತಿ, ತನ್ನನ್ನು ತಾನು ದಾವೂದ್ ಇಬ್ರಾಹಿಮ್ ನ ಸಹೋದರ ಇಕ್ಬಾಲ್ ಕಸ್ಕಾರ್ ಗೆ ಸಂಬಂಧಿಸಿದವನಾಗಿದ್ದೇನೆ ಎಂದು ಹೇಳಿಕೊಂಡಿದ್ದು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿರವುದಕ್ಕಾಗಿ ತಮ್ಮನ್ನು ಹತ್ಯೆ ಮಾಡುವುದಾಗಿ ದಾವೂದ್ ಗ್ಯಾಂಗ್ ಬೆದರಿಕೆ ಹಾಕಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಬೆದರಿಕೆ ಕರೆ ಮಾಡಿದಾಗ ಸೆರೆ ಆ ವ್ಯಕ್ತಿಯೊಂದಿಗೆ ಪ್ರಗ್ಯಾ ಸಿಂಗ್ ಠಾಕೂರ್ 2 ನಿಮಿಷ ಮಾತನಾಡಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಈ ವಿಡಿಯೋ ವೈರಲ್ ಆಗತೊಡಗಿದೆ. ಬೆದರಿಕೆ ಕರೆ ಬಂದಿದ್ದರ ಸಂಬಂಧ ಪ್ರಗ್ಯಾ ಸಿಂಗ್ ಠಾಕೂರ್ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ