ಮೊರ್ಬಿ ಸೇತುವೆ
ದೇಶ
ಗುಜರಾತ್: ಮೊರ್ಬಿ ಸೇತುವೆ ನಿರ್ವಹಣಾ ಸಂಸ್ಥೆಯ ಕಚೇರಿ ಸೀಲ್
134 ಮಂದಿಯನ್ನು ಬಲಿ ಪಡೆದ ಗುಜರಾತ್ನ ಮೊರ್ಬಿಯ ತೂಗು ಸೇತುವೆಯ ನಿರ್ವಹಣೆ ಮಾಡುತ್ತಿದ್ದ ಅಹಮದಾಬಾದ್‌ನ ಒರೆವಾ ಕಂಪನಿಯ ಕಚೇರಿಯನ್ನು ಸೀಲ್ ಮಾಡಲಾಗಿದೆ.
ಮೊರ್ಬಿ: 134 ಮಂದಿಯನ್ನು ಬಲಿ ಪಡೆದ ಗುಜರಾತ್ನ ಮೊರ್ಬಿಯ ತೂಗು ಸೇತುವೆಯ ನಿರ್ವಹಣೆ ಮಾಡುತ್ತಿದ್ದ ಅಹಮದಾಬಾದ್‌ನ ಒರೆವಾ ಕಂಪನಿಯ ಕಚೇರಿಯನ್ನು ಸೀಲ್ ಮಾಡಲಾಗಿದೆ.
ಘಟನೆ ಸಂಬಂಧ ಒರೆವಾ ಕಂಪನಿಯ ವ್ಯವಸ್ಥಾಪಕರು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಈ ಪಾರಂಪರಿಕ ತಾಣ ಕಳೆದ ಆರು ತಿಂಗಳಿನಿಂದ ನವೀಕರಿಸಲಾಗಿದ್ದು, ಇದರ 15 ವರ್ಷಗಳ ನಿರ್ವಹಣೆಯ ಗುತ್ತಿಗೆಯನ್ನು ಮೊರ್ಬಿ ಪುರಸಭೆ, ಒರೆವಾ ಗ್ರೂಪ್(ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್) ಎಂಬ ಖಾಸಗಿ ಸಂಸ್ಥೆಗೆ ವಹಿಸಿತ್ತು.
ಇದು ದೇಶ ಕಂಡ ಅತ್ಯಂತ ಘೋರ ದುರಂತವಾಗಿದ್ದು, ಫಿಟ್‌ನೆಸ್ ಪ್ರಮಾಣಪತ್ರ ಪಡೆಯದೆ ಮತ್ತು ಅವಧಿಗೂ ಮುನ್ನವೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂಬ ಆರೋಪಗಳು ಒರೆವಾ ಕಂಪನಿ ವಿರುದ್ಧ ಕೇಳಿಬಂದಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ