

ನವದೆಹಲಿ: ಕರ್ಕರ್ಡೂಮಾ ನ್ಯಾಯಾಲಯದ ಬಳಿಯ ಪ್ರಿಯಾ ಎನ್‌ಕ್ಲೇವ್‌ನಲ್ಲಿ ಡಂಪಿಂಗ್ ಯಾರ್ಡ್‌ಗಾಗಿ ಎಂಸಿಡಿ ನಿಗದಿಪಡಿಸಿದ್ದ ಭೂಮಿಯಲ್ಲಿ ಅನಧಿಕೃತವಾಗಿ ಗ್ರಂಥಾಲಯ ನಿರ್ಮಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಿಮಾಂಶು ರಮಣ್ ಸಿಂಗ್ ಅವರು ಸೋಮವಾರ ಗೌತಮ್ ಗಂಭೀರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಡಿಸೆಂಬರ್ 13, 2022ಕ್ಕೆ ವಿಚಾರಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದನ್ನು ಓದಿ: ಗೌತಮ್ ಗಂಭೀರ್'ಗೆ ಕೊರೋನಾ ಪಾಸಿಟಿವ್
ಅರ್ಜಿದಾರರು ಹಾಗೂ ವಕೀಲರಾದ ರವಿ ಭಾರ್ಗವ ಮತ್ತು ರೋಹಿತ್ ಕುಮಾರ್ ಮಹಿಯಾ ಅವರು ಗಂಭೀರ್ ಮತ್ತು ಎಂಸಿಡಿ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದು, ಗಂಭೀರ್ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಬಳಸದಂತೆ ತಡೆಬೇಕು ಎಂದು ಕೋರಿದ್ದಾರೆ.
ಪ್ರಸ್ತುತ ಮೊಕದ್ದಮೆಯನ್ನು ಸೆಕ್ಷನ್ 91 ಸಿಪಿಸಿ ಅಡಿಯಲ್ಲಿ ಪರಿಗಣಿಸಬಹುದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.