ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ: ದೆಹಲಿ ಹೈಕೋರ್ಟ್

ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 
ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ
ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ

ನವದೆಹಲಿ: ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಇಬ್ಬರು ವಿದೇಶಿಗರು ತಮ್ಮ ವಿವಾಹವನ್ನು ಸಿಂಧುಗೊಳಿಸಬೇಕು ಹಾಗೂ ಅದನ್ನು 1954 ರ ವಿದೇಶಿ ಕಾಯ್ದೆಯ ಪ್ರಕಾರ, ವಿವಾಹವನ್ನು ನೋಂದಣಿ ಮಾಡಲು ಅನುಮತಿ ನೀಡುವಂತೆ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದರು. 

ಕೆನಡಾದ ಪೌರತ್ವ ಹೊಂದಿದ್ದ ಹಿಂದೂ ಮಹಿಳೆ ಹಾಗೂ ಅಮೇರಿಕನ್ ಪೌರತ್ವ ಹೊಂದಿರುವ ಕ್ರೈಸ್ತ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಯಶ್ವಂತ್ ವರ್ಮಾ, ಈ ಅಭಿಪ್ರಾಯ ಪ್ರಕಟಿಸಿದೆ. 

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರು ದೆಹಲಿಯಲ್ಲಿ 6 ತಿಂಗಳಿನಿಂದ ಇದ್ದು, ಇನ್ನೂ ಹೆಚ್ಚಿನ ಅವಧಿ ಇಲ್ಲಿಯೇ ಇರಲು ಉದ್ದೇಶಿಸಿದ್ದಾರೆ ಹಾಗೂ ವಿಶೇಷ ವಿವಾಹ ಕಾಯ್ದೆ (ಎಸ್ಎಂಎ) ಅಡಿಯಲ್ಲಿ ವಿವಾಹವಾಗಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೇರೆ ಕಾನೂನುಗಳು ಅಂತರ್ಧರ್ಮೀಯ ವಿವಾಹವನ್ನು ನಿರ್ಬಂಧಿಸುವುದರಿಂದ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗುವುದಕ್ಕೆ ಉದ್ದೇಶಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು,  ಮುಂದಿನ ವಿಚಾರಣೆಯನ್ನು ಡಿಸೆಂಬರ್ 15 ಕ್ಕೆ ಮುಂದೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com