ಸಾಂಸಾರಿಕ ಬದುಕಿನ ಬಂಧನ ತ್ಯಜಿಸಿ 'ದೀದಿ ಮಾ' ಆಗಲಿದ್ದಾರೆ ಬಿಜೆಪಿ 'ಫೈರ್ ಬ್ರ್ಯಾಂಡ್' ಉಮಾ ಭಾರತಿ!

ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಎಲ್ಲಾ ಕೌಟುಂಬಿಕ ಸಂಬಂಧಗಳಿಂದ ದೂರವಾಗಿದ್ದು, ಇನ್ಮುಂದೆ “ದೀದಿ ಮಾ” ಎಂದು ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಉಮಾ ಭಾರತಿ
ಉಮಾ ಭಾರತಿ

ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಎಲ್ಲಾ ಕೌಟುಂಬಿಕ ಸಂಬಂಧಗಳಿಂದ ದೂರವಾಗಿದ್ದು, ಇನ್ಮುಂದೆ “ದೀದಿ ಮಾ” ಎಂದು ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ಆದೇಶದ ಮೇರೆಗೆ ತಮ್ಮ ಕುಟುಂಬದೊಂದಿಗಿನ ಎಲ್ಲಾ ಸಂಬಂಧಗಳನ್ನು ತೊರೆದಿದ್ದು, ನನ್ನನ್ನು ದೀದಿ ಮಾ ಎಂದು ಮಾತ್ರ ಗುರುತಿಸಿಕೊಳ್ಳುತ್ತೇನೆ. ಇಡೀ ವಿಶ್ವ ಸಮುದಾಯವೇ ನನ್ನ ಕುಟುಂಬವಾಗಿರಬೇಕು ಎಂದು ತಿಳಿಸಿದ್ದಾರೆ.

ಉಮಾ ಭಾರತಿ 30 ವರ್ಷಗಳ ಹಿಂದೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ  ಪಡೆದಿದ್ದರು. ಅದಕ್ಕೂ ಮೊದಲು 1997ರಲ್ಲಿ ಆನಂದಮಯಿ ಮಾ ಅವರಿಂದ ಬ್ರಹ್ಮಚರ್ಯ ದೀಕ್ಷೆ  ಪಡೆದಿದ್ದರು. ನಂತರ ಮಧ್ಯಪ್ರದೇಶದ  ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವೆಯಾಗಿ ಸುದೀರ್ಘ ರಾಜಕಾರಣ ಮಾಡಿದ್ದರು. ಈಗ ತಮ್ಮ ಗುರುವಿನ ಅಣತಿಯಂತೆ ನ.17ರಿಂದ ಹೆಸರು ಬದಲಿಸಿಕೊಂಡು ಕುಟುಂಬವನ್ನು ತ್ಯಜಿಸುತ್ತೇನೆಂದು ಪ್ರಕಟಿಸಿದ್ದಾರೆ. ಆದರೆ, ರಾಜಕಾರಣದಲ್ಲಿ ಮುಂದುವರೆಯುತ್ತೇನೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ನ್ನ ಕುಟುಂಬ, ನನ್ನ ಸಹೋದರರು, ಸೋದರಳಿಯರು ಮತ್ತು ಸೊಸೆಯಂದಿರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನನಗೆ ರಾಜಕೀಯದಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆಡಳಿತದಲ್ಲಿಯೂ ಸಾಕಷ್ಟು ಸುಳ್ಳು ಪ್ರಕರಣ, ಕಿರುಕುಳ ಮತ್ತು ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ನನ್ನ ಪೋಷಕರು ಕಲಿಸಿದ ಉತ್ತಮ ಮೌಲ್ಯಗಳು, ನನ್ನ ಗುರುಗಳ ಸಲಹೆ, ನನ್ನ ಜಾತಿ ಮತ್ತು ಕುಲದ ಘನತೆ, ನನ್ನ ಪಕ್ಷದ ಸಿದ್ಧಾಂತ ಮತ್ತು ದೇಶಕ್ಕಾಗಿ ನನ್ನ ಜವಾಬ್ದಾರಿ ಇದ್ಯಾವುದರಿಂದಲೂ ನನಗೆ ಮುಕ್ತಿಸಿಗುವುದಿಲ್ಲ ಎಂದು ಹೀಗೆ ಕೌಟುಂಬಿಕ ಬಂಧದಿಂದ ಮುಕ್ತರಾಗುವ ಬಗ್ಗೆ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com