ಐಷಾರಾಮಿ ವಾಚ್: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಖ್ ಖಾನ್ ಗೆ ತಡೆ!

ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಅವರ ತಂಡದ 5 ಸದಸ್ಯರನ್ನು ಮುಂಬೈ ನ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗಳ ಕಾಲ ಸೀಮಾಸುಂಕ ಅಧಿಕಾರಿಗಳು ತಡೆದಿದ್ದರು.
ಶಾರೂಖ್ ಖಾನ್
ಶಾರೂಖ್ ಖಾನ್

ಮುಂಬೈ: ಐಷಾರಾಮಿ ವಾಚ್ ಗಳನ್ನು ಹೊಂದಿದ್ದ ಕಾರಣಕ್ಕಾಗಿ ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಅವರ ತಂಡದ 5 ಸದಸ್ಯರನ್ನು ಮುಂಬೈ ನ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗಳ ಕಾಲ ಸೀಮಾಸುಂಕ ಅಧಿಕಾರಿಗಳು ತಡೆದಿದ್ದರು.

ಶನಿವಾರದಂದು ಬೆಳಗಿನ ಜಾವ ಪಾವತಿ ವ್ಯವಸ್ಥೆ ಚಾಲ್ತಿಯಲ್ಲಿರದ ಕಾರಣ ಶಾರೂಖ್ ಖಾನ್ ಹಾಗೂ ಅವರ ತಂಡದವರಿಗೆ 6 ಐಷಾರಾಮಿ ವಾಚ್ ಗಳಿಗೆ ಸೀಮಾಸುಂಕ ಪಾವತಿಸಲು ಸಾಧ್ಯವಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಶಾರೂಖ್ ಖಾನ್ ಹಾಗೂ ತಂಡದ ಸದಸ್ಯರನ್ನು ಒಂದು ಗಂಟೆಗಳ ಕಾಲ ತಡೆಯಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಘಟನೆ ಶಾರೂಖ್ ಖಾನ್ ದುಬೈ ನಿಂದ ಚಾರ್ಟೆಡ್ ಫ್ಲೈಟ್ ನಲ್ಲಿ ಮಧ್ಯರಾತ್ರಿ 12.30ಕ್ಕೆ ಬಂದಿಳಿದಾಗ ನಡೆದಿದೆ. ಆ ವೇಳೆಯಲ್ಲಿ ಸಾಮಾನ್ಯ ವೈಮಾನಿಕ ಟರ್ಮಿನಲ್ (ಜಿಎಟಿ)ಯಲ್ಲಿ ಪಾವತಿ ಕೌಂಟರ್ ಕಾರ್ಯಾಚರಣೆಯಲ್ಲಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾರೂಖ್ ಖಾನ್ ಹಾಗೂ ತಂಡದವರ ಬ್ಯಾಗೇಜ್ ನ್ನು ಪರಿಶೀಲಿಸುವಾಗ, ಸೀಮಾಸುಂಕದ ಮೌಲ್ಯಮಾಪನದ ಪ್ರಕಾರ ಅವರ ಬಳಿ 17.86 ಲಕ್ಷ ರೂಪಾಯಿ ಮೌಲ್ಯ 6 ಐಷಾರಾಮಿ ವಾಚ್ ಗಳು ಪತ್ತೆಯಾಗಿದೆ. ಈ ವಾಚ್ ಗಳಿದ್ದ ಬ್ಯಾಗ್ ಶಾರೂಖ್ ಖಾನ್ ಅವರ ಬಾಡಿ ಗಾರ್ಡ್ ರವಿ ಶಂಕರ್ ಸಿಂಗ್ ಬಳಿ ಇತ್ತು. ಕೆಲ ಹೊತ್ತಿನ ಬಳಿಕ ಖಾನ್ ಹಾಗೂ ಅವರ ಕಾರ್ಯದರ್ಶಿ ಪೂಜಾ ದಾದ್ಲಾನಿ ಹಾಗೂ ಇನ್ನೂ ಮೂವರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ರವಿಶಂಕರ್ ಸಿಂಗ್ ಅವರನ್ನು ಕರೆದೊಯ್ದು, ವಿಮಾನ ನಿಲ್ದಾಣದ ಟರ್ಮಿನಲ್-II ಬಳಿ ಕರೆದೊಯ್ದರು, 6.88 ಲಕ್ಷ ರೂಪಾಯಿ ಮೊತ್ತದ ಸುಂಕವನ್ನು ಕಟ್ಟಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com