
ನವದೆಹಲಿ: ಪಶ್ಚಿಮ ಬಂಗಾಳ ನೂತನ ರಾಜ್ಯಪಾಲರಾಗಿ ಸಿ ವಿ ಆನಂದ ಬೋಸ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ಆನಂದ ಬೋಸ್ ಅವರ ನೇಮಕವು ಅವರು ಅಧಿಕಾರ ಸ್ವೀಕರಿಸುವ ದಿನದಿಂದಲೇ ಜಾರಿಗೆ ಬರಲಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
"ಡಾ.ಸಿ.ವಿ. ಆನಂದ ಬೋಸ್ ಅವರನ್ನು ಪಶ್ಚಿಮ ಬಂಗಾಳ ಗವರ್ನರ್ ಆಗಿ ನೇಮಿಸಿರುವುದು ಭಾರತದ ರಾಷ್ಟ್ರಪತಿಗಳಿಗೆ ಸಂತೋಷ ನೀಡಿದೆ" ಎಂದು ಪ್ರಕಟಣೆ ತಿಳಿಸಿದೆ.
ಈ ಹಿಂದೆ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧಂಕರ್ ಅವರು ಉಪ ರಾಷ್ಟ್ರಪತಿಗಳಾಗಿ ನೇಮಕಗೊಂಡ ನಂತರ ಜುಲೈನಿಂದ ಮಣಿಪುರ ಗವರ್ನರ್ ಲಾ ಗಣೇಶನ್ ಅವರು ಪಶ್ಚಿಮ ಬಂಗಾಳದ ಹೆಚ್ಚುವರಿ ಹೊಣೆ ವಹಿಸಿಕೊಂಡಿದ್ದರು.
Advertisement