ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಬಾಡಿ ಮಸಾಜ್, ಸಿಸಿಟಿವಿ ದೃಶ್ಯಾವಳಿ ವೈರಲ್!

ಜೈಲಿನಲ್ಲಿ ಪ್ರಭಾವಿಗಳಿಗೆ ಬೇಕಾದ ಸೌಲಭ್ಯಗಳು ಸಿಗುತ್ತವೆ ಎಂಬ ಆಪಾದನೆಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗಿದ್ದು ಅದರಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಬಾಡಿ ಮಸಾದ್ ಮಾಡುತ್ತಿರುವ ದೃಶ್ಯವಿದೆ.
ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಗೆ ಬಾಡಿ ಮಸಾಜ್ ಮಾಡುತ್ತಿರುವುದು
ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಗೆ ಬಾಡಿ ಮಸಾಜ್ ಮಾಡುತ್ತಿರುವುದು
Updated on

ನವದೆಹಲಿ: ಜೈಲಿನಲ್ಲಿ ಪ್ರಭಾವಿಗಳಿಗೆ ಬೇಕಾದ ಸೌಲಭ್ಯಗಳು ಸಿಗುತ್ತವೆ ಎಂಬ ಆಪಾದನೆಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗಿದ್ದು ಅದರಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಬಾಡಿ ಮಸಾದ್ ಮಾಡುತ್ತಿರುವ ದೃಶ್ಯವಿದೆ.

ತಿಹಾರ್ ಜೈಲಿನಿಂದ ಸಚಿವರನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿದ ಬೆನ್ನಲ್ಲೇ ಈ ವಿಡಿಯೊ ವೈರಲ್ ಆಗಿದೆ. ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಮೇ 30ರಂದು ಜಾರಿ ನಿರ್ದೇಶನಾಲಯ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು.

ಈ ಸಿಸಿಟಿವಿ ದೃಶ್ಯಾವಳಿ ಸೆಪ್ಟೆಂಬರ್ 13ರದ್ದಾಗಿದ್ದು, ಸಚಿವರು ಬೆಡ್ ಮೇಲೆ ಮಲಗಿಕೊಂಡು ಯಾವುದೋ ಕಾಗದಪತ್ರಗಳನ್ನು ತಿರುವಿ ಹಾಕುತ್ತಾ ಓದುತ್ತಿದ್ದಾರೆ. ಅವರ ಪಕ್ಕ ಕುಳಿತ ವ್ಯಕ್ತಿ ಅವರ ಕಾಲಿಗೆ ಮಸಾಜ್ ಮಾಡುತ್ತಿದ್ದಾರೆ. 

ಮತ್ತೊಂದು ವಿಡಿಯೊವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹ್ಜಾದ್ ಪೂನವಾಲ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಚಿವರಿಗೆ ಹೆಡ್ ಮಸಾಜ್ ಮಾಡುವ ಮುನ್ನ ಕಾಲು ಮತ್ತು ಬೆನ್ನಿಗೆ ಮಜಾಜ್ ಮಾಡುತ್ತಿದ್ದಾರೆ. 

ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಸಂಪೂರ್ಣ ವಿವಿಐಪಿ ಸೌಲಭ್ಯ ಪಡೆಯುತ್ತಾರೆಯೇ, ತಿಹಾರ್ ಜೈಲಿನೊಳಗೆ ಮಸಾಜ್ 5 ತಿಂಗಳಿನಿಂದ ಜಾಮೀನು ಸಿಗದವರಿಗೆ ತಲೆಗೆ ಮಸಾಜ್ ಆಪ್ ಸರ್ಕಾರದಿಂದ ನಿಯಮಗಳ ಉಲ್ಲಂಘನೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 10 ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಸತ್ಯೇಂದ್ರ ಜೈನ್ ಅವರಿಗೆ ತಿಹಾರ್ ಜೈಲಿನಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ ಎಂದು ಆರೋಪ ಮಾಡಿತ್ತು.

ಈ ಆರೋಪದ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡುವ ಮೂಲಕ ಬಿಜೆಪಿಯವರು ಮಾತ್ರ ಇಂತಹ ಕ್ರೂರ ಹಾಸ್ಯ ಮಾಡಲು ಸಾಧ್ಯ, ಅವರ ಬೆನ್ನುಮೂಳೆಗೆ ಹಾನಿಯಾಗಿದೆ, ಅದಕ್ಕೆ ವೈದ್ಯಕೀಯ ದಾಖಲೆಗಳೇ ಇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com