ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಹೊಸ ವಿಡಿಯೊ ಬಿಡುಗಡೆ: ಜೈಲಿನಲ್ಲಿ ಚೆನ್ನಾಗಿ ಊಟ ಸವಿಯುತ್ತಿರುವ ಸತ್ಯೇಂದ್ರ ಜೈನ್

ತಿಹಾರ್ ಜೈಲಿನೊಳಗೆ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ ಟೀಕೆ ಆರೋಪಗಳು ವ್ಯಕ್ತವಾಗುತ್ತಿರುವುದರ ಮಧ್ಯೆ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ಹೊರಬಿದ್ದಿದೆ.
ತಿಹಾರ್ ಜೈಲಿನೊಳಗೆ ಹಣ್ಣು, ಡ್ರೈ ಫ್ರೂಟ್ ಸೇರಿದಂತೆ ಆಹಾರ ಸವಿಯುತ್ತಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್
ತಿಹಾರ್ ಜೈಲಿನೊಳಗೆ ಹಣ್ಣು, ಡ್ರೈ ಫ್ರೂಟ್ ಸೇರಿದಂತೆ ಆಹಾರ ಸವಿಯುತ್ತಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್

ನವದೆಹಲಿ: ತಿಹಾರ್ ಜೈಲಿನೊಳಗೆ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿ ಟೀಕೆ ಆರೋಪಗಳು ವ್ಯಕ್ತವಾಗುತ್ತಿರುವುದರ ಮಧ್ಯೆ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ಹೊರಬಿದ್ದಿದೆ.

ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಸತ್ಯೇಂದ್ರ ಜೈನ್ ತಿಹಾರ್ ಜೈಲಿನೊಳಗೆ ಊಟ ಸವಿಯುತ್ತಿರುವ ವಿಡಿಯೊವಿದೆ.ಸತ್ಯೇಂದ್ರ ಜೈನ್ ಅವರಿಗೆ ಆರೋಗ್ಯ ಸರಿಯಿಲ್ಲ, 28 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಕೋರ್ಟ್ ಗೆ ಹೇಳಿಕೆ ನೀಡಿದ್ದರು. ಆದರೆ ಜೈಲಿನಲ್ಲಿರುವಾಗ 8 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಜೈಲು ಸಿಬ್ಬಂದಿಯೇ ಹೇಳುತ್ತಾರೆ. ಅದಕ್ಕೆ ಪೂರಕವೆಂಬಂತೆ ಈ ವಿಡಿಯೊವಿದ್ದು ಅದರಲ್ಲಿ ಅವರಿಗೆ ಜೈಲಿನೊಳಗೆ ಭೂರಿ ಭೋಜನ ಸಿಗುತ್ತಿದೆ ಎಂದು ಗೊತ್ತಾಗುತ್ತಿದೆ. 

ನಿನ್ನೆ ಮಂಗಳವಾರ ಸತ್ಯೇಂದ್ರ ಜೈನ್ ಪರ ವಕೀಲರು ತ್ವರಿತ ನ್ಯಾಯಾಲಯ ಮುಂದೆ ಹೇಳಿಕೆ ನೀಡಿ ಸತ್ಯೇಂದ್ರ ಜೈನ್ ಅವರಿಗೆ ಸರಿಯಾದ ಆಹಾರ ಜೈಲಿನೊಳಗೆ ಸಿಗುತ್ತಿಲ್ಲ, ವೈದ್ಯಕೀಯ ತಪಾಸಣೆ ಕೂಡ ಸರಿಯಾಗಿ ಆಗುತ್ತಿಲ್ಲ ಎಂದಿದ್ದರು. ಇದರಿಂದ 28 ಕೆ ಜಿ ತೂಕ ಕಳೆದುಕೊಂಡಿದ್ದಾರೆ ಎಂದಿದ್ದರು.

ಅದಕ್ಕೆ ಕೌಂಟರ್ ಆಗಿ ಬಿಜೆಪಿ ವಕ್ತಾರ ಶೆಹನಾಜ್ ಪೂನವಾಲಾ ಈ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೊ ಕಳೆದ ಶನಿವಾರ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆಗಿದೆ. ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಗೆ ವಿಶೇಷ ಸೌಲಭ್ಯ ಸಿಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ 10 ದಿನಗಳ ನಂತರ ಈ ವಿಡಿಯೊ ವೈರಲ್ ಆಗಿದೆ. 

ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಸತ್ಯೇಂದ್ರ ಜೈನ್ ಕಳೆದ ಜೂನ್ ತಿಂಗಳಿನಿಂದ ಜೈಲಿನಲ್ಲಿದ್ದಾರೆ. ನವೆಂಬರ್ 16ರಂದು ದೆಹಲಿ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com