ಗುಜರಾತ್ ಚುನಾವಣೆ: ನಾಳೆ ನಾಲ್ಕು ಕಡೆ ಪ್ರಧಾನಿ ನರೇಂದ್ರ ಮೋದಿ ರ್‍ಯಾಲಿ ಸಾಧ್ಯತೆ

ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ನಾಲ್ಕು ಕಡೆ ಪ್ರಚಾರದ ರ್‍ಯಾಲಿ ನಡೆಸುವ ಸಾಧ್ಯತೆಯಿದೆ. ಕಚ್ ನ ಅಂಜರ್,  ಜಾಮ್‌ನಗರದ ಗೋರ್ಧನ್‌ಪುರ, ಭಾವ ನಗರದ ಪಾಲಿಟಾನಾ, ಮತ್ತು ಸೋಮವಾರ ರಾಜ್‌ಕೋಟ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ರಾಜ್ ಕೋಟ್: ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ನಾಲ್ಕು ಕಡೆ ಪ್ರಚಾರದ ರ್‍ಯಾಲಿ ನಡೆಸುವ ಸಾಧ್ಯತೆಯಿದೆ. ಕಚ್ ನ ಅಂಜರ್,  ಜಾಮ್‌ನಗರದ ಗೋರ್ಧನ್‌ಪುರ, ಭಾವ ನಗರದ ಪಾಲಿಟಾನಾ, ಮತ್ತು ಸೋಮವಾರ ರಾಜ್‌ಕೋಟ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತೆ ಬರುತ್ತಿದ್ದು, ಬೃಹತ್ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಲ್ಲಿದ್ದೇವೆ ಎಂದು ರಾಜ್ ಕೋಟ್ ಬಿಜೆಪಿ ಅಧ್ಯಕ್ಷ ಕಮಲೇಶ್ ಮಿರಾನಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಮೋದಿ ಅವರನ್ನು ನೋಡಲು ಮತ್ತು ಅವರ ಮಾತನ್ನು ಜನರು ಇಷ್ಟಪಡಲಿದ್ದು, ರಾಜಕೋಟ್ ನ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು. 

ಮೋದಿ ಅವರು ಮೊದಲ ಬಾರಿಗೆ ರಾಜ್ ಕೋಟ್ ನಿಂದ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅವರಿಗೆ ಆ ಕ್ಷೇತ್ರದ ಬಗ್ಗೆ ಅತ್ಯಂತ ಮೃಧು ಧೋರಣೆ ಇರುವುದರ ಜೊತೆಗೆ ಈ ಕ್ಷೇತ್ರಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಲ್ಲಿನ ಸಾರ್ವಜನಿಕ ಸಮಾವೇಶ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದು, ರಾಜ್ ಕೋಟ್ ನೆಲದಿಂದ ಭಾರತೀಯ ಜನತಾ ಪಕ್ಷ ಮತ್ತೆ ಗೆಲ್ಲಲಿದೆ ಎಂದರು. ನಾಳೆ ಸಂಜೆ 6 ಗಂಟೆಗೆ ಮೋದಿ ರಾಜಕೋಟ್ ಗೆ ಬರಲಿದ್ದು, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು. 

ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ರಾಜ್ ಕೋಟ್ ನಲ್ಲಿ 4,309 ಕೋಟಿ ಮತ್ತು ಮೋರ್ಬಿ ಜಿಲ್ಲೆಯಲ್ಲಿ ರೂ. 2,738 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದರು.  ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com