ಉದ್ಧವ್ ಠಾಕ್ರೆ ತಂಡ
ಉದ್ಧವ್ ಠಾಕ್ರೆ ತಂಡ

ಅಂಧೇರಿ ಉಪ ಚುನಾವಣೆ: ಕೋರ್ಟ್ ಕದನದ ನಂತರ ಮೊದಲ ಚುನಾವಣಾ ಹೋರಾಟದಲ್ಲಿ ಠಾಕ್ರೆ vs ಶಿಂಧೆ

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ ಬಳಿಕ ಮೊದಲ ಸಾರ್ವಜನಿಕ ಚುನಾವಣೆ ಎದುರಿಸುತ್ತಿದ್ದಾರೆ.

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ ಬಳಿಕ ಮೊದಲ ಸಾರ್ವಜನಿಕ ಚುನಾವಣೆ ಎದುರಿಸುತ್ತಿದ್ದಾರೆ. ಶಿಂಧೆ ನೇತೃತ್ವದ ಬಣವು ಶಿವಸೇನೆಯ ಶಾಸಕ ದಿವಂಗತ ರಮೇಶ್ ಲಟ್ಕೆ ಪ್ರತಿನಿಧಿಸುತ್ತಿದ್ದ ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ತನ್ನ ಮೊದಲ ಅಗ್ನಿಪರೀಕ್ಷೆ ಎದುರಿಸಲಿದೆ.

ಶಿವಸೇನೆಯ ಎರಡೂ ಬಣಗಳು ಶಿವಸೇನೆಯ “ಬಿಲ್ಲು ಮತ್ತು ಬಾಣ” ಚಿಹ್ನೆಗಾಗಿ ಹೋರಾಡುತ್ತಿರುವಾಗ ಮುಂಬರುವ ಉಪ ಚುನಾವಣೆಯ ಸ್ಪರ್ಧೆಯು ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ‘ನಿಜವಾದ’ ಶಿವಸೇನೆ ಮತ್ತು ಚುನಾವಣಾ ಚಿಹ್ನೆಯ ಹಂಚಿಕೆಯನ್ನು ನಿರ್ಧರಿಸಲು ಚುನಾವಣಾ ಆಯೋಗವು ಪ್ರಸ್ತುತ ಮನವಿಗಳನ್ನು ಆಲಿಸುತ್ತಿದೆ.

ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಸೋಮವಾರ ಉಪಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಸತತ ಎರಡು ಬಾರಿ ಗೆದ್ದಿದ್ದ ಲಟ್ಕೆ ಅವರ ನಿಧನದ ನಂತರ ಅಂಧೇರಿ (ಪೂರ್ವ) ಸ್ಥಾನವು ಮೇ ತಿಂಗಳಲ್ಲಿ ತೆರವಾಗಿತ್ತು.

ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿಂಧೆ ಬಣವು ಮುಂಬೈ ನಾಗರಿಕ ಸಂಸ್ಥೆಯ ಮಾಜಿ ಕಾರ್ಪೊರೇಟರ್ ಮುರ್ಜಿ ಪಟೇಲ್ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ದಿವಂಗತ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

Related Stories

No stories found.

Advertisement

X
Kannada Prabha
www.kannadaprabha.com