ಎಮ್ಮೆಗಳಿಗೆ ಗುದ್ದಿ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾನಿ; 24 ಗಂಟೆಯಲ್ಲಿ ದುರಸ್ತಿ!

ಹಾನಿಗೊಳಗಾದ ನೂತನ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದುರಸ್ತಿ ಕಾರ್ಯ ಒಂದೇ ದಿನದೊಳಗೆ ಮುಗಿದು ಎಂದಿನಂತೆ ಸಂಚಾರಕ್ಕೆ ಸಿದ್ಧವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ 24 ಗಂಟೆಗಳಲ್ಲಿ ದುರಸ್ತಿ!
ವಂದೇ ಭಾರತ್ ಎಕ್ಸ್‌ಪ್ರೆಸ್ 24 ಗಂಟೆಗಳಲ್ಲಿ ದುರಸ್ತಿ!

ನವದೆಹಲಿ: ಹಾನಿಗೊಳಗಾದ ನೂತನ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದುರಸ್ತಿ ಕಾರ್ಯ ಒಂದೇ ದಿನದೊಳಗೆ ಮುಗಿದು ಎಂದಿನಂತೆ ಸಂಚಾರಕ್ಕೆ ಸಿದ್ಧವಾಗಿದೆ.

ಗುಜರಾತ್‌ನಲ್ಲಿ ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದ ಒಂದು ಭಾಗ ಮುರಿದು ಹೋಗಿತ್ತು. ರೈಲಿನ ಮುಂದಿನ ಮೂಗಿನಂತಹ ಭಾಗ ಎಫ್ ಆರ್ ಪಿಯಿಂದ ಮಾಡಲ್ಪಟ್ಟಿದೆ.

ಹೊಸದಾಗಿ ಪ್ರಾರಂಭಿಸಲಾದ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11:15 ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಮುಂದಿನ ಭಾಗ ಹಾನಿಗೊಳಗಾಗಿತ್ತು.

ಜಾನುವಾರುಗಳಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ರೈಲಿನ ಡ್ರೈವರ್ ಕೋಚ್ ನ ಮುಂದಿನ ಮೂಗಿನ ರೂಪದ ಭಾಗ ಮತ್ತು ಅದರ ಮೌಂಟಿಂಗ್ ಬ್ರಾಕೆಟ್‌ಗಳು ಹಾನಿಗೊಳಗಾಯಿತೇ ವಿನಃ ರೈಲಿನ ಪ್ರಮುಖ ಭಾಗಗಳಿಗೆ ಯಾವುದೇ ಹಾನಿಯಾಗಿಲ್ಲ. ಹಾನಿಗೊಳಗಾದ ಭಾಗವನ್ನು ಅನ್ನು ಮುಂಬೈ ಸೆಂಟ್ರಲ್‌ನಲ್ಲಿರುವ ಕೋಚ್ ಕೇರ್ ಸೆಂಟರ್‌ನಲ್ಲಿ ಬದಲಾಯಿಸಲಾಯಿತು ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com