ಹೈದರಾಬಾದ್: ಟಿಪ್ಪು ಎಕ್ಸ್ ಪ್ರೆಸ್ ಗೆ ಒಡೆಯರ್ ಎಂದು ಮರು ನಾಮಕರಣ ಮಾಡಿರುವುದಕ್ಕೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಟಿಪ್ಪು ಬ್ರಿಟಿಷರ ವಿರುದ್ಧ ಮೂರು ಯುದ್ಧ ಮಾಡಿದ್ದಕ್ಕೆ ಬಿಜೆಪಿಗೆ ಆಕ್ರೋಶವಿದೆ. ಮತ್ತೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಆದರೆ, ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾವಣೆ ಅಗತ್ಯವಿರಲಿಲ್ಲ ಎಂದಿದ್ದಾರೆ.
ಟಿಪ್ಪು ಪರಂಪರೆಯನ್ನು ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement