10 ಬಾರಿ ಶಾಸಕ...7 ಬಾರಿ ಸಂಸದ... ಶಿಕ್ಷಕ ವೃತ್ತಿಯಿಂದ ರಾಜಕೀಯ ಪ್ರವೇಶಿಸಿದ ಮುಲಾಯಂ ಸಿಂಗ್ ಯಾದವ್ ಬದುಕು

ಉತ್ತರ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಭಾರತದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ 10 ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್

ಲಖ್ನೊ: ಉತ್ತರ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಭಾರತದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ 10 ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇಂದು ಬೆಳಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ತಮ್ಮ 82ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಮತ್ತು ಸಮಾಜವಾದಿ ಪಕ್ಷದ ಈಗಿನ ಮುಖ್ಯಸ್ಥ ಅಖಿಲೇಶ್ ಅವರು ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ತಂದೆಯ ನಿಧನವನ್ನು ಖಚಿತಪಡಿಸಿದ್ದಾರೆ.

"ನನ್ನ ಗೌರವಾನ್ವಿತ ತಂದೆ ಮತ್ತು ಪ್ರತಿಯೊಬ್ಬರ ನಾಯಕ ಇನ್ನಿಲ್ಲ" ಎಂದು ಬರೆದುಕೊಂಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ಆಗಸ್ಟ್ 22 ರಿಂದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾರದ ಹಿಂದೆ ಅವರನ್ನು ಐಸಿಯುಗೆ ಮತ್ತು ನಂತರ ಸಿಸಿಯುಗೆ ಸ್ಥಳಾಂತರಿಸಿದಾಗ ಅವರ ಸ್ಥಿತಿ ಹದಗೆಟ್ಟಿತು. 

ಆಸ್ಪತ್ರೆಯ ಮೂಲಗಳ ಪ್ರಕಾರ, ಮುಲಾಯಂ ಸಿಂಗ್ ಯಾದವ್ ತೀವ್ರ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದರು, ಇದು ಅವರ ಆರೋಗ್ಯ ಅಸಮತೋಲನಕ್ಕೆ ಕಾರಣವಾಯಿತು. ಅಂತಹ ಸ್ಥಿತಿಯಲ್ಲಿ, ಸ್ವಲ್ಪ ಸಮಯದವರೆಗೆ ಅವರನ್ನು ಡಯಾಲಿಸಿಸ್‌ನಲ್ಲಿ ಇರಿಸಿಕೊಂಡು, ವೈದ್ಯರು ನಿರಂತರ ಮೂತ್ರಪಿಂಡ ಬದಲಿ ಚಿಕಿತ್ಸೆ (CRRT) ಬೆಂಬಲ ಮತ್ತು ಜೀವ ಉಳಿಸುವ ಔಷಧಿಗಳ ಮೇಲೆ ಇಷ್ಟು ದಿನ ಆಸ್ಪತ್ರೆಯಲ್ಲಿ ಇರಿಸಿದ್ದರು. 

ನವೆಂಬರ್ 22, 1939 ರಂದು, ಮಧ್ಯ ಉತ್ತರ ಪ್ರದೇಶದ ಇಟ್ವಾ ಜಿಲ್ಲೆಯ ಸೈಫಾಯಿ ಗ್ರಾಮದಲ್ಲಿ ಜನಿಸಿದ ಮುಲಾಯಂ ಸಿಂಗ್ ಯಾದವ್ ಇಟಾವಾದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಫತೇಹಾಬಾದ್ ಮತ್ತು ಆಗ್ರಾದಲ್ಲಿ ಶಿಕ್ಷಣ ಪಡೆದರು. ಪ್ರಸಿದ್ಧ ಕುಸ್ತಿಪಟು, ಮುಲಾಯಂ ಅವರು ತಮ್ಮ ಪದವಿ ಮತ್ತು ಬ್ಯಾಚುಲರ್ ಆಫ್ ಟೀಚಿಂಗ್ (BT) ಮುಗಿಸಿದ ನಂತರ ಆಗ್ರಾ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು, ಅಲ್ಲಿ ಅವರು ರಾಜಕೀಯ ವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.

ಶಿಕ್ಷಕರಾಗಿ ವೃತ್ತಿ ಆರಂಭ: ಚಾಣಾಕ್ಷ ರಾಜಕಾರಣಿ, ಮುಲಾಯಂ ಅವರು ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಲ್ಲಿರುವ ಜೈನ್ ಇಂಟರ್ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ತಾವು ಕಲಿತ ಶಾಲೆಯಲ್ಲಿಯೇ 1963 ರಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅವರು ಹಿಂದಿ ಮತ್ತು ಸಮಾಜ ವಿಜ್ಞಾನವನ್ನು ಕಲಿಸುತ್ತಿದ್ದರು.

1960 ರಲ್ಲಿ ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ನೇತೃತ್ವದ ಚಳವಳಿಯಲ್ಲಿ ಸಮಾಜವಾದಿ ನಾಯಕರಿಂದ ಪ್ರಭಾವಿತರಾದ ರಾಜಕೀಯಕ್ಕೆ ಆಕರ್ಷಿತರಾದರು. 1967 ರಲ್ಲಿ ಜಸ್ವಂತನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು.

ಯುಪಿಯಾದ್ಯಂತ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿ 10 ಬಾರಿ ಶಾಸಕ ಮತ್ತು ಏಳು ಬಾರಿ ಸಂಸದರಾಗುವ ಮೂಲಕ ಮುಲಾಯಂ ಅವರು 1992 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು 1989 ರಲ್ಲಿ ಮೊದಲ ಬಾರಿಗೆ ಯುಪಿ ಸಿಎಂ ಆಗಿ ಗದ್ದುಗೆ ಏರಿದರು. ಅವರು 1989-1991 ರವರೆಗೆ ಮೂರು ಬಾರಿ ಯುಪಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. 1993-1995 ಮತ್ತು 2003 ರಿಂದ 2007. ಅವರು ಕೇಂದ್ರದಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ಅವಧಿಯಲ್ಲಿ 1996-1998 ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದರು.

ಪ್ರಸ್ತುತ, ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಮೈನ್‌ಪುರಿ ಸಂಸದರಾಗಿ ಪ್ರತಿನಿಧಿಸುತ್ತಿದ್ದರು. ಭಾರತದ ಮಾಜಿ ರಕ್ಷಣಾ ಸಚಿವರೂ ಆಗಿದ್ದ ಸಮಾಜವಾದಿ ಪಕ್ಷದ ಪೋಷಕ ಮುಲಾಯಂ ಸಿಂಗ್ ಯಾದವ್ ಅವರ ನಿಧನವು ಭಾರತೀಯ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ" ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. 

ಹಿರಿಯ ನಾಯಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅವರ ನಿಧನದಿಂದ ದೇಶದಲ್ಲಿ ಸಮಾಜವಾದಿ ಚಳವಳಿಗಳ ಯುಗ ಅಂತ್ಯಗೊಂಡಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜಿ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಅವರ ಮರಣವು ಸಮಾಜವಾದದ ಪ್ರಮುಖ ಸ್ತಂಭ ಮತ್ತು ಹೋರಾಟದ ಯುಗದ ಅಂತ್ಯವನ್ನು ಕಂಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. 

ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ: ಮುಲಾಯಂ ಸಿಂಗ್ ಯಾದವ್ ಅವರ ಪಾರ್ಥಿವ ಶರೀರವನ್ನು ಲಕ್ನೋಗೆ ತಂದು ವಿಧಾನಸಭೆ ಮತ್ತು ಎಸ್ಪಿ ಕಚೇರಿ ಆವರಣದಲ್ಲಿ ಇರಿಸಲಾಗುವುದು. ಅವರ ಹುಟ್ಟೂರಾದ ಇಟಾವಾಹ್‌ನ ಸೈಫೈ ಗ್ರಾಮದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com