ಬಲಕ್ಕೆ ಎಡ ಬೆಂಬಲ: ಅಂಧೇರಿ ಉಪ ಚುನಾವಣೆಯಲ್ಲಿ ಠಾಕ್ರೆ ಬಣಕ್ಕೆ ಸಿಪಿಐ ಬೆಂಬಲ

ಶಿವಸೇನೆಯ ಉದ್ಧವ್ ಠಾಕ್ರೆ ಬಣ ಅತ್ಯಂತ ನಿರ್ಣಾಯಕವಾದ ನವೆಂಬರ್ 3 ರಂದು ನಡೆಯುವ ಅಂಧೇರಿ(ಪೂರ್ವ) ವಿಧಾನಸಭಾ ಉಪಚುನಾವಣೆಗೆ ಸಜ್ಜಾಗುತ್ತಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಬೆಂಬಲ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ಅತ್ಯಂತ ನಿರ್ಣಾಯಕವಾದ ನವೆಂಬರ್ 3 ರಂದು ನಡೆಯುವ ಅಂಧೇರಿ(ಪೂರ್ವ) ವಿಧಾನಸಭಾ ಉಪಚುನಾವಣೆಗೆ ಸಜ್ಜಾಗುತ್ತಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಬೆಂಬಲ ಪಡೆದುಕೊಂಡಿದೆ. 1970 ರಲ್ಲಿ ಕೇಸರಿ ಪಕ್ಷ ಸಿಪಿಐ ಅಭ್ಯರ್ಥಿಯನ್ನು ಸೋಲಿಸಿತು, ಇದು ಮುಂಬೈನಲ್ಲಿ ಎಡ ಶಕ್ತಿಗಳ ಅವನತಿಗೆ ಕಾರಣವಾಯಿತು.

ಬುಧವಾರ, ಸಿಪಿಐ ಮುಖಂಡರ ನಿಯೋಗ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮುಂಬೈ ಉಪನಗರ ಅಂಧೇರಿ(ಪೂರ್ವ) ಉಪಚುನಾವಣೆಯಲ್ಲಿ ಅವರ ಬಣದ ಅಭ್ಯರ್ಥಿಗೆ ಎಡಪಕ್ಷದ ಬೆಂಬಲವನ್ನು ಘೋಷಿಸಿತು.

ಸಿಪಿಐನ ಮುಂಬೈ ಕಾರ್ಯದರ್ಶಿ ಮಿಲಿಂದ್ ರಾನಡೆ ಅವರು ಶಿವಸೇನೆಯ ಹಾಲಿ ಶಾಸಕ ರಮೇಶ್ ಲಟ್ಕೆ ಅವರ ನಿಧನದಿಂದ ತೆರವಾಗಿರುವ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಠಾಕ್ರೆ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

"ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸಿಪಿಐ, ಎಂವಿಎ(ಮಹಾ ವಿಕಾಸ್ ಅಘಾಡಿ) ಜೊತೆ ನಿಲ್ಲುತ್ತದೆ" ಎಂದು ರಾನಡೆ ತಿಳಿಸಿದ್ದಾರೆ.

ಮಾಜಿ ಸಿಎಂ ಬಣಕ್ಕೆ ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಹೆಸರನ್ನು ಚುನಾವಣಾ ಆಯೋಗ (ಇಸಿ) ನೀಡಿದೆ.

ಕಳೆದ ಜೂನ್ ನಲ್ಲಿ ಠಾಕ್ರೆಯವರ ನಾಯಕತ್ವದ ವಿರುದ್ಧದ ಬಂಡಾಯದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಬಾಳಾಸಾಹೆಬಂಚಿ ಶಿವಸೇನೆ ಎಂಬ ಹೆಸರನ್ನು ಚುನಾವಣಾ ಆಯೋಗ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com