ಕ್ಷಿಪಣಿ ಮಾನವ, ಬಾಹ್ಯಾಕಾಶ ವಿಜ್ಞಾನಿ, ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ ಎ ಪಿ ಜೆ ಅಬ್ದುಲ್ ಕಲಾಂ ಜಯಂತಿ

ಇಂದು ಅಕ್ಟೋಬರ್ 15, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಪಾರ‌ ಕೊಡುಗೆ ನೀಡಿದ ಭಾರತದ ಕ್ಷಿಪಣಿ ಮಾನವ, ಬಾಹ್ಯಾಕಾಶ ವಿಜ್ಞಾನಿ, ಜನ ಸಾಮಾನ್ಯರ ರಾಷ್ಟ್ರಪತಿಗಳಾಗಿ ಜನಮಾನಸದಲ್ಲಿರುವ ಭಾರತರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮಜಯಂತಿ.
ಡಾ ಎ ಪಿ ಜೆ ಅಬ್ದುಲ್ ಕಲಾಂ(ಸಂಗ್ರಹ ಚಿತ್ರ)
ಡಾ ಎ ಪಿ ಜೆ ಅಬ್ದುಲ್ ಕಲಾಂ(ಸಂಗ್ರಹ ಚಿತ್ರ)

ನವದೆಹಲಿ: ಇಂದು ಅಕ್ಟೋಬರ್ 15, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಪಾರ‌ ಕೊಡುಗೆ ನೀಡಿದ ಭಾರತದ ಕ್ಷಿಪಣಿ ಮಾನವ, ಬಾಹ್ಯಾಕಾಶ ವಿಜ್ಞಾನಿ, ಜನ ಸಾಮಾನ್ಯರ ರಾಷ್ಟ್ರಪತಿಗಳಾಗಿ ಜನಮಾನಸದಲ್ಲಿರುವ ಭಾರತರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮಜಯಂತಿ.

ಈ ದಿನ ಇಡೀ ದೇಶ ಅವರನ್ನು ಸ್ಮರಿಸಿ ಅವರ ಕೊಡುಗೆ, ಗುಣಗಳನ್ನು ಕೊಂಡಾಡುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ರಾಜಕೀಯ ನಾಯಕರು ಅಬ್ದುಲ್ ಕಲಾಂ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ.

ಇಂದು ಅವರ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಎಜೆಪಿ ಅಬ್ದುಲ್ ಕಲಾಂ ಅವರು 1931ರ ಅಕ್ಟೋಬರ್ 15ರಂದು ಜನಿಸಿದರು. ಅವರು 2002 ರಿಂದ 2007 ರವರೆಗೆ ಭಾರತದ 11ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತದ ಮೊದಲ ಬ್ರಹ್ಮಚಾರಿ ರಾಷ್ಟ್ರಪತಿ ಆಗಿದ್ದಾರೆ. ಅಬ್ದುಲ್ ಕಲಾಂ ಅವರು ಧರ್ಮದಿಂದ ಮುಸಲ್ಮಾನನಾಗಿದ್ದರೂ ಶುದ್ಧ ಸಸ್ಯಾಹಾರಿಯಾಗಿದ್ದರು.

ಅಬ್ದುಲ್ ಕಲಾಂ ಅವರು ಭಾರತ ಮತ್ತು ವಿದೇಶಗಳ 48 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದ್ದಕ್ಕೆ ಜನರು ಅವರನ್ನು ಭಾರತದ ಮಿಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ) ಎಂದು ಕರೆಯುತ್ತಾರೆ. ಅಧಿಕಾರವು ಗೌರವವನ್ನು ನೀಡುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಮತ್ತು ನಾವು ಶಕ್ತಿಯುತವಾಗಿದ್ದರೆ ಮಾತ್ರ ಇತರ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತವೆ ಎಂದು ನಂಬಿದ್ದರು.

1981 ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ ಮುಂತಾದ ಪ್ರಶಸ್ತಿಗಳನ್ನು ಹೊಂದಿದ್ದರು ಮತ್ತು 1997ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು.

ಡಾ. ಕಲಾಂ ಅವರು 2015ರ ಜುಲೈ 27ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದಾಗಲೇ ವೇದಿಕೆ ಮೇಲೆ ಕುಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಹೃದಯಾಘಾತದಿಂದ ನಿಧನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com