ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ ರಾಜಾ ಮರು ಆಯ್ಕೆ

ಭಾರತೀಯ ಕಮ್ಯುನಿಸ್ಟ್ ಪಕ್ಷವು ತನ್ನ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಾಯಕ ಡಿ ರಾಜಾ ಅವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಿದೆ.
ಡಿ ರಾಜಾ
ಡಿ ರಾಜಾ
Updated on

ವಿಜಯವಾಡ:ಭಾರತೀಯ ಕಮ್ಯುನಿಸ್ಟ್ ಪಕ್ಷವು ತನ್ನ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಾಯಕ ಡಿ ರಾಜಾ ಅವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಿದೆ.

ಹಾಲಿ ಪ್ರಧಾನ ಕಾರ್ಯದರ್ಶಿ ಸುಧಾಕರ್ ರೆಡ್ಡಿ ಅನಾರೋಗ್ಯದ ಕಾರಣದಿಂದ ಕೆಳಗಿಳಿದ ನಂತರ ಜುಲೈ 2019 ರಲ್ಲಿ ರಾಜಾ ಅವರು ಪಕ್ಷದ ಆಡಳಿತವನ್ನು ವಹಿಸಿಕೊಂಡರು. ಕಮ್ಯೂನಿಸ್ಟ್ ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದ ದಲಿತ ಸಮುದಾಯದ ಮೊದಲ ವ್ಯಕ್ತಿಯಾಗಿದ್ದಾರೆ.

ಮರು ಆಯ್ಕೆಯಾದ ನಂತರ, ಬಿಜೆಪಿಯನ್ನು ಸೋಲಿಸುವುದೇ ತಮ್ಮ ಪಕ್ಷದ ಪ್ರಾಥಮಿಕ ಅಜೆಂಡಾ ಎಂದು ರಾಜಾ ಹೇಳಿದರು. ಆರೆಸ್ಸೆಸ್-ಬಿಜೆಪಿ ಒಕ್ಕೂಟವನ್ನು ಸೋಲಿಸಲು ಎಡಪಕ್ಷಗಳು ಒಗ್ಗೂಡಿ ಎಂದು ಕರೆ ನೀಡಿದರು. ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ ಅವರು, ಇದು ಜಾತ್ಯತೀತ ಭಾರತವನ್ನು ಪುನರ್ ವ್ಯಾಖ್ಯಾನಿಸಲು ಮತ್ತು ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

2025 ರಲ್ಲಿ 100 ವರ್ಷಗಳನ್ನು ಪೂರೈಸಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಇತ್ತೀಚಿನ ಚುನಾವಣಾ ಪ್ರದರ್ಶನಗಳ ಬಗ್ಗೆ ರಾಜಾ ಕಳವಳ ವ್ಯಕ್ತಪಡಿಸಿದರು.ನಾವು ಪಕ್ಷವನ್ನು ಪುನಶ್ಚೇತನಗೊಳಿಸಬೇಕು ಮತ್ತು ಸಾಮೂಹಿಕ ಚಳುವಳಿಗಳಲ್ಲಿ ತೊಡಗಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com