ಮಹಾರಾಷ್ಟ್ರ: ಪಂಚಾಯತ್ ಚುನಾವಣೆಯಲ್ಲಿ ಶಿಂಧೆ ಬಣಕ್ಕೆ ಮುಖಭಂಗ!

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಮಹಾರಾಷ್ಟ್ರ ಸಚಿವರಾದ ಉದಯ್ ಸಾಮಂತ್ ಮತ್ತು ಶಾಸಕ ಭರತ್ ಗೊಗವಾಲೆ ಅವರ ಬೆಂಬಲಿತ ಸಮಿತಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಫಡ್ನವಿಸ್-ಏಕನಾಥ್ ಶಿಂಧೆ
ಫಡ್ನವಿಸ್-ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಮಹಾರಾಷ್ಟ್ರ ಸಚಿವರಾದ ಉದಯ್ ಸಾಮಂತ್ ಮತ್ತು ಶಾಸಕ ಭರತ್ ಗೊಗವಾಲೆ ಅವರ ಬೆಂಬಲಿತ ಸಮಿತಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

ಇನ್ನು ಶಿಂಧೆ ಗುಂಪಿನ ಸದಸ್ಯರೂ ಆಗಿರುವ ಶಾಲಾ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಅವರ ತವರು ಜಿಲ್ಲೆ ಸಿಂಧುದುರ್ಗದಲ್ಲಿ ಆಡಳಿತಾರೂಢ ಬಿಜೆಪಿ ಮೂರು ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದ್ದರೆ, ನಾಲ್ಕನೇ ಸ್ಥಾನವನ್ನು ಉದ್ಧವ್ ಠಾಕ್ರೆ ನೇತೃತ್ವದ ಸೇನಾ ಬಣ ಪಡೆದುಕೊಂಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

1,079 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ 397 ಸ್ಥಾನಗಳನ್ನು ಗೆದ್ದಿದೆ ಅಂತ ಹೇಳಿಕೊಂಡಿದ್ದರೆ, ಸಿಎಂ ಶಿಂಧೆ ನೇತೃತ್ವದ 'ಬಾಳಾಸಾಹೆಬಂಚಿ ಶಿವಸೇನಾ' ಜಂಟಿಯಾಗಿ 478ಕ್ಕೆ ತಲುಪಿದೆ ಎಂದು ಹೇಳಿದೆ. ಆದರೆ, ರತ್ನಗಿರಿಯಲ್ಲಿ ಕೈಗಾರಿಕಾ ಸಚಿವ ಸಾಮಂತ್ ತವರು ಶಿರ್ಗಾಂವ್, ಫಾನ್ಸಾಪ್ ಮತ್ತು ಪೊಮೆಂಡಿ ಬುದ್ರುಕ್ ಎಂಬ ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಜನರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಅದರ ಮಿತ್ರಪಕ್ಷಗಳ ಪರವಾಗಿ ಮತ ಹಾಕಿದ್ದಾರೆ.

ಶಿಂಧೆ ಬಣದ ಮುಖ್ಯ ಸಚೇತಕ ಗೋಗವಾಲೆ ಅವರ ತವರಾದ ರಾಯಗಡದ ಕಲೀಜ್-ಖಾರವಲಿ ಗ್ರಾಮದಲ್ಲಿ ಅವರ ಬೆಂಬಲಿತ ಸಮಿತಿ 10 ಸ್ಥಾನಗಳನ್ನು ಗೆದ್ದುಕೊಂಡರೆ, ಎನ್‌ಸಿಪಿಯೊಂದಿಗೆ ಠಾಕ್ರೆ ಪಾಳಯವು 11 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com